ADVERTISEMENT

ಖ್ಯಾತ ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ ನಿಧನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 7:34 IST
Last Updated 9 ಜೂನ್ 2022, 7:34 IST
ಪುರುಷೋತ್ತಮ ಕಣಗಾಲ್
ಪುರುಷೋತ್ತಮ ಕಣಗಾಲ್   

ಬೆಂಗಳೂರು: ಖ್ಯಾತ ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್(69) ಅವರು ಬುಧವಾರ ಅಮೆರಿಕಾದ ತಮ್ಮ ಮಗಳ ನಿವಾಸದಲ್ಲಿ ನಿಧನರಾಗಿದ್ದಾರೆ.

ಅವರು, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪುರುಷೋತ್ತಮ ಕಣಗಾಲ್, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣ, ಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪುತ್ರ. ಪುರುಷೋತ್ತಮ ಅವರು ಕನ್ನಡದ ಸಾಕಷ್ಟು ಚಿತ್ರಗಳಿಗೆ ಗೀತರಚನೆ ಮಾಡಿದ್ದಾರೆ.

ವೃತ್ತಿಯಲ್ಲಿ ಬ್ಯಾಂಕ್‌ ನೌಕರರಾಗಿದ್ದ ಅವರು ಕಲಾಸಕ್ತಿಯನ್ನು ಹವ್ಯಾಸವಾಗಿಟ್ಟುಕೊಂಡಿದ್ದರು. ಕಣಗಾಲ್ ನೃತ್ಯಾಲಯ ಹಾಗೂ ಪುಟ್ಟಣ್ಣ ಕಣಗಾಲ್ ಟ್ರಸ್ಟ್‌ನ ಮುಖ್ಯಸ್ಥರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಶ್ರೀದರ್ಶನ್‌ ಅವರು ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದ ‘ಮಹಾಕಾವ್ಯ’ ಸಿನಿಮಾದಲ್ಲಿ ಪೊನ್ನನಾಗಿ ಪುರುಷೋತ್ತಮ ಕಣಗಾಲ್‌ ಅಭಿನಯಿಸಿದ್ದರು. ಅವರ ತಮ್ಮ, ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್‌ ಅವರ ಪುತ್ರ, ನೃತ್ಯ ನಿರ್ದೇಶಕ ರಾಮು ಕಣಗಾಲ್‌ ಅವರು ಕಳೆದ ವರ್ಷ ಕೋವಿಡ್‌ನಿಂದ ನಿಧನರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.