ADVERTISEMENT

ಬಾಲಿವುಡ್‌ ನಿರ್ಮಾಪಕ ಹರೀಶ್‌ ಶಾ ನಿಧನ

ಪಿಟಿಐ
Published 7 ಜುಲೈ 2020, 14:44 IST
Last Updated 7 ಜುಲೈ 2020, 14:44 IST
ಹರೀಶ್‌ ಶಾ
ಹರೀಶ್‌ ಶಾ   

ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕಹರೀಶ್‌ ಶಾ(76) ಅವರು ಮಂಗಳವಾರ ನಿಧನರಾದರು.

ಹತ್ತು ವರ್ಷದಿಂದ ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಪವನ್‌ ಹನ್ಸ್‌ ಚಿತಾಗಾರದಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲಾಯಿತುಎಂದು ಅವರ ಸಹೋದರ ವಿನೋದ್‌ ಶಾ ತಿಳಿಸಿದ್ದಾರೆ.

ಇವರು 1972 ರಲ್ಲಿ ಬಿಡುಗಡೆಗೊಂಡಿದ್ದ ರಾಜೇಶ್‌ ಖನ್ನಾ ಅಭಿನಯದ ‘ಮೇರೆ ಜೀವನ್‌ ಸಾಥಿ’ ನಿರ್ಮಾಪಕರಾಗಿದ್ದರು. ಈ ಚಿತ್ರ ಹರೀಶ್‌ ಶಾ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ‘ಕಾಲಾ–ಸೋನಾ’, ‘ರಾಮ್‌ ತೇರಿ ಕಿತ್ನೆ ನಾಮ್‌’ ಇವರ ನಿರ್ಮಾಣದಲ್ಲಿ ಮೂಡಿಬಂದ ಪ್ರಮುಖ ಚಲನಚಿತ್ರಗಳು. ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ ‘ಧನ್‌ ದೌಲತ್‌’. ಇದರಲ್ಲಿ ರಿಷಿ ಕಪೂರ್‌ ಮತ್ತು ನೀತು ಕಪೂರ್‌ ಮುಖ್ಯ ಪಾತ್ರಧಾರಿಗಳಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.