ADVERTISEMENT

ಕ್ರೈಸ್ತರ ಭಾವನೆಗಳಿಗೆ ಧಕ್ಕೆ ಆರೋಪ: ಸನ್ನಿ ಡಿಯೋಲ್, ರಣದೀಪ್ ವಿರುದ್ಧ FIR

ಪಿಟಿಐ
Published 18 ಏಪ್ರಿಲ್ 2025, 7:19 IST
Last Updated 18 ಏಪ್ರಿಲ್ 2025, 7:19 IST
   

ಜಲಂಧರ್: 'ಜಾಟ್' ಚಿತ್ರದಲ್ಲಿನ ಒಂದು ದೃಶ್ಯವು ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ದೂರಿನ ಮೇರೆಗೆ ನಟರಾದ ಸನ್ನಿ ಡಿಯೋಲ್, ರಣದೀಪ್ ಹೂಡಾ ಮತ್ತು ಇತರ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಏಪ್ರಿಲ್ 10 ರಂದು ಬಿಡುಗಡೆಯಾದ 'ಜಾಟ್' ಚಿತ್ರದಲ್ಲಿ ಯೇಸುಕ್ರಿಸ್ತ ಮತ್ತು ಕ್ರೈಸ್ತ ಧಾರ್ಮಿಕ ಆಚರಣೆಗಳನ್ನು ಅಗೌರವಿಸುವ ದೃಶ್ಯಗಳಿವೆ ಎಂದು ಕ್ರೈಸ್ತ ಸಮುದಾಯದ ಮುಖಂಡರು ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.

ನಟರಾದ ಸನ್ನಿ ಡಿಯೋಲ್, ರಣದೀಪ್ ಹೂಡಾ ಮತ್ತು ವಿನೀತ್ ಕುಮಾರ್, ನಿರ್ದೇಶಕ ಗೋಪಿಚಂದ್ ಮತ್ತು ನಿರ್ಮಾಪಕ ನವೀನ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಜಲಂಧರ್ ದಂಡು ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ADVERTISEMENT

ಬುಧವಾರ ಸಂಜೆ ಎಫ್‌ಐಆರ್ ದಾಖಲು ಮಾಡಲಾಗಿದೆ.

ವಿಕ್ಲವ್ ಗೋಲ್ಡ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗುಡ್ ಫ್ರೈಡೆ ಆಸುಪಾಸಿನಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದನ್ನೂ ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.