ADVERTISEMENT

ಕಾನ್ ಚಿತ್ರೋತ್ಸವದಲ್ಲಿ ವಿಭಿನ್ನ ಉಡುಗೆಯಲ್ಲಿ ಮಿಂಚಿದ ಐಶ್ವರ್ಯಾ ರೈ

ಐಎಎನ್ಎಸ್
Published 19 ಮೇ 2023, 12:42 IST
Last Updated 19 ಮೇ 2023, 12:42 IST
ಐಶ್ವರ್ಯಾ ರೈ
ಐಶ್ವರ್ಯಾ ರೈ   

ಕಾನ್‌(ಫ್ರಾನ್ಸ್‌): ದಕ್ಷಿಣ ಫ್ರಾನ್ಸ್‌ನ ಕಾನ್‌ನಲ್ಲಿ 76ನೇ ಕಾನ್‌ ಚಲನಚಿತ್ರೋತ್ಸವ ನಡೆಯುತ್ತಿದ್ದು, ‘ಇಂಡಿಯಾನಾ ಜೋನ್ಸ್‌ ಮತ್ತು ಡಯಲ್‌ ಆಫ್‌ ಡೆಸ್ಟಿನಿ’ ಚಲನಚಿತ್ರದ ಪ್ರದರ್ಶನದ ಸಂದರ್ಭ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್‌ ಭಾಗವಹಿಸಿದ್ದರು.

ಗುರುವಾರ ಸಂಜೆ 21ನೇ ಬಾರಿಗೆ ಕಾನ್‌ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಫ್ರೆಂಚ್‌ ಛಾಯಾಗ್ರಾಹಕರು ಊರ್ವಶಿ ರೌಟೇಲಾರನ್ನು ಐಶ್ವರ್ಯಾ ರೈ ಎಂದು ತಪ್ಪಾಗಿ ಭಾವಿಸಿದರೆ, ಕಾರ್ಯಕ್ರಮದಲ್ಲಿನ ಜನರು ಐಶ್ವರ್ಯಾ ರೈ ಅವರ ಉಡು‍‍ಪಿನ ಆಯ್ಕೆಯನ್ನು ನೋಡಿ ತಬ್ಬಿಬ್ಬಾಗಿದ್ದಾರೆ.

ಕೆಲವರು ಇದನ್ನು ‘ಹೂಡಿ ಕೌಚರ್‌’ ಎಂದು ಕರೆದಿದ್ದಾರೆ. ತಮ್ಮ ಉದ್ದನೆಯ ಕಪ್ಪು ಗೌನ್‌ ಮೇಲೆ ಆಕರ್ಷಕವಾಗಿ ಕಾಣಿಸಬೇಕೆಂಬ ಆತುರದಲ್ಲಿ ಅಡುಗೆ ಮನೆಯಿಂದ ಅಲ್ಯೂಮಿನಿಯಂ ಫಾಯಿಲ್ ಹಾಳೆಯನ್ನು ಎತ್ತಿಕೊಂಡು ಹಾಕಿಕೊಂಡಂತೆ ತೋರುತ್ತಿದೆ ಎಂದು ಮತ್ತೆ ಕೆಲವರು ಜರಿದಿದ್ದಾರೆ. ಆದರೆ, ಆಕೆಯ ಅಭಿಮಾನಿಗಳು ಮಾತ್ರ ‘ಕ್ವೀನ್‌ ಆಫ್‌ ಕಾನ್‌’ ನಂತೆ ಕಾಣಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಳೆದ ವರ್ಷ, ಐಶ್ವರ್ಯಾ ರೈ ಅವರು ರಾಬರ್ಟೋ ಕವಾಲಿ ವಿನ್ಯಾಸಗೊಳಿಸಿದ್ದ ಚಿನ್ನದ ಬಣ್ಣದ ಮತ್ಸ್ಯಕನ್ಯೆಯ ಗೌನ್‌ನಲ್ಲಿ ಸಿಂಡ್ರೆಲಾ ತರಹ ಕಾಣಿಸಿಕೊಂಡಿದ್ದರು.

ಕಾರ್ಯಕ್ರಮ ದಿನದ ಬೆಳಿಗ್ಗೆ ಐಶ್ವರ್ಯಾ ರೈ ಲೋರಿಯಲ್‌ ಈವೆಂಟ್‌ಗಾಗಿ ಆಕರ್ಷಕವಾದ ಹಸಿರು ಬಣ್ಣದ ಮಿನುಗುವ ಉಡುಪನ್ನು ಧರಿಸಿದ್ದರು ಎಂದು ವ್ಯಾಲೆಂಟಿನೋ ವರದಿ ಮಾಡಿದೆ. ಐಶ್ವರ್ಯಾ ರೈ ಎರಡು ದಶಕಗಳಿಗೂ ಹೆಚ್ಚು ಕಾಲ ಸೌಂದರ್ಯವರ್ಧಕಗಳನ್ನು ಪ್ರತಿನಿಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.