ADVERTISEMENT

ಅಮ್ಮನಾಗುವ ಖುಷಿಯಲ್ಲಿ ನಟಿ ಫ್ರೀಡಾ ಪಿಂಟೊ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 9:04 IST
Last Updated 29 ಜೂನ್ 2021, 9:04 IST
ಕೋರಿ ಟ್ರಾನ್  ಹಾಗೂ ಪಿಂಟೊ
ಕೋರಿ ಟ್ರಾನ್ ಹಾಗೂ ಪಿಂಟೊ   

ಆಸ್ಕರ್‌ ಪುರಸ್ಕೃತ‘ಸ್ಲಮ್ ಡಾಗ್ ಮಿಲಿಯನೇರ್’ ಸಿನಿಮಾ ಖ್ಯಾತಿಯ ನಟಿ ಫ್ರೀಡಾ ಪಿಂಟೊ ತಾವು ತಾಯಿಯಾಗುತ್ತಿರುವ ಖುಷಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸೋಮವಾರ ರಾತ್ರಿ ಇನ್‌ಸ್ಟಾಗ್ರಾಂನಲ್ಲಿಕೋರಿ ಟ್ರಾನ್ ಜೊತೆಗಿರುವ ಬೇಬಿ ಬಂಪ್‌ ಚಿತ್ರವನ್ನು ಶೇರ್‌ ಮಾಡುವ ಮೂಲಕ ಅಮ್ಮನಾಗುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಆ ಚಿತ್ರದ ಜೊತೆಗೆ ಬೇಬಿ ಟ್ರಾನ್‌ ಬರುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.

2017ರಿಂದಲೂಫ್ರೀಡಾ ಪಿಂಟೊ ಹಾಗೂ ಕೋರಿ ಟ್ರಾನ್‌ ಡೇಟಿಂಗ್‌ನಲ್ಲಿ ಇದ್ದಾರೆ. 2019ರಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಪ್ರಕಟಿಸಿದ್ದರೂ ಬಳಿಕ ಸುಮ್ಮನಾಗಿದ್ದರೂ. ಇದೀಗಫ್ರೀಡಾ ಪಿಂಟೊ ಗರ್ಭಿಣಿಯಾಗಿರುವ ಚಿತ್ರವನ್ನು ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ADVERTISEMENT

ಫ್ರೀಡಾ ಪಿಂಟೊ ತಾಯಿಯಾಗುತ್ತಿರುವ ವಿಚಾರ ತಿಳಿದ ಹಾಲಿವುಡ್‌ ಹಾಗೂ ಬಾಲಿವುಡ್‌ನ ಹಲವಾರು ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.

‘ಸ್ಲಮ್ ಡಾಗ್ ಮಿಲಿಯನೇರ್’ ಚಿತ್ರದಲ್ಲಿ ನಟಿಸಿದ್ದ ಸಹ ನಟ ದೇವ್‌ ಪಟೇಲ್‌ ಜೊತೆ 6 ವರ್ಷಗಳ ಕಾಲಫ್ರೀಡಾ ಪಿಂಟೊ ಡೇಟಿಂಗ್‌ ಮಾಡಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಆ ಜೋಡಿ 2016ರಲ್ಲಿ ಬೇರೆಯಾಗಿತ್ತು. 2017ರಲ್ಲಿಫ್ರೀಡಾ ಪಿಂಟೊಗೆ ಕೋರಿ ಟ್ರಾನ್‌ ಜೊತೆಯಾದರು.

ಸ್ಲಮ್ ಡಾಗ್ ಮಿಲಿಯನೇರ್, ಮೀರಲ್, ಹಾಗೂ ತ್ರಿಶಾ ಸಿನಿಮಾಗಳುಫ್ರೀಡಾ ಪಿಂಟೊಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಸದ್ಯ ಹಾಲಿವುಡ್‌ನ ಹಲವು ಸಿನಿಮಾ ಹಾಗೂ ವೆಬ್‌ ಸೀರೀಸ್‌ನಲ್ಲಿ ಅವರು ಸಕ್ರಿಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.