ADVERTISEMENT

ಡಿಸೆಂಬರ್‌ನಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌ ಮದುವೆ?

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 6:52 IST
Last Updated 25 ನವೆಂಬರ್ 2021, 6:52 IST
ಕತ್ರಿನಾ, ವಿಕ್ಕಿ
ಕತ್ರಿನಾ, ವಿಕ್ಕಿ   

ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್‌ ಬರುವ ಡಿಸೆಂಬರ್‌ ತಿಂಗಳ 7 ಅಥವಾ 12ರಂದು ಮದುವೆಯಾಗಲಿರುವುದು ಬಹುತೇಕ ಖಚಿತವಾಗಿದೆ.

ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ಸರಣಿಯಲ್ಲಿ ವರದಿಗಳನ್ನು ಪ್ರಕಟಿಸುತ್ತಿವೆ.

ವಿಕ್ಕಿ ಹಾಗೂ ಕತ್ರಿನಾ ಅವರು ಸೆಲೆಬ್ರಿಟಿ ಮ್ಯಾನೇಜರ್‌ ಖ್ಯಾತಿಯ ರೆಷ್ಮಾ ಶೆಟ್ಟಿ ಅವರು ವಿನ್ಯಾಸ ಮಾಡಿರುವ ಉಡುಪುಗಳನ್ನು ಧರಿಸಲಿದ್ದಾರೆ ಎಂದು ರೆಷ್ಮಾ ಶೆಟ್ಟಿಯ ಆಪ್ತರು ತಿಳಿಸಿದ್ದಾರೆ. ಇವರಮದುವೆ ರಾಜಸ್ತಾನದ ಜೈಪುರದಲ್ಲಿ ನಡೆಯುವುದು ಬಹುತೇಕ ನಿಶ್ಚಿತವಾಗಿದೆ.

ADVERTISEMENT

ಮದುವೆ ಕಾರ್ಯಕ್ರಮ ಕುರಿತಂತೆ ವಿಕ್ಕಿ ಹಾಗೂ ಕತ್ರಿನಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಮದುವೆಗೆ ಮೊಬೈಲ್‌ ಫೋನ್‌ಗಳನ್ನು ಬ್ಯಾನ್‌ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇನ್ನು ಜೈಪುರದ ಖಾಸಗಿ ಹೋಟೇಲ್‌ನಲ್ಲಿ ಮದುವೆಯ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ ವಿಕ್ಕಿ ಹಾಗೂ ಕತ್ರಿನಾ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.

ಎರಡು ವರ್ಷಗಳಿಂದ ಕತ್ರಿನಾ ಹಾಗೂ ವಿಕ್ಕಿ ಕೌಶಲ್‌ ಡೇಟಿಂಗ್ ಮಾಡುತ್ತಿದ್ದು ಇದೀಗ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. 2019ರಲ್ಲಿ ದೀಪಾವಳಿ ಹಬ್ಬದಂದು ಕತ್ರಿನಾ ಅವರು ವಿಕ್ಕಿ ಮನೆಗೆ ಭೇಟಿ ನೀಡಿದ್ದರು. ಅವರ ಕುಟುಂಬಕ್ಕೆ ಕತ್ರಿನಾ ತುಂಬಾ ಹತ್ತಿರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.