ADVERTISEMENT

Kannada Movies: ‘ಫುಲ್‌ ಮೀಲ್ಸ್‌’ ಬಡಿಸ್ತಾರೆ ಲಿಖಿತ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 0:30 IST
Last Updated 18 ನವೆಂಬರ್ 2025, 0:30 IST
ಖುಷಿ ರವಿ, ಲಿಖಿತ್‌ ಶೆಟ್ಟಿ, ತೇಜಸ್ವಿನಿ ಶರ್ಮಾ 
ಖುಷಿ ರವಿ, ಲಿಖಿತ್‌ ಶೆಟ್ಟಿ, ತೇಜಸ್ವಿನಿ ಶರ್ಮಾ    

‘ಫುಲ್‌ ಮೀಲ್ಸ್‌’ ಸವಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ನ.21ರಂದು ಈ ಸಿನಿಮಾ ತೆರೆಕಾಣುತ್ತಿದ್ದು, ಒಂದು ತ್ರಿಕೋನ ಪ್ರೇಮಕಥೆಯೊಂದಿಗೆ ಬರುತ್ತಿದ್ದಾರೆ ನಟ ಲಿಖಿತ್‌ ಶೆಟ್ಟಿ. 

‘ಫ್ಯಾಮಿಲಿ ಪ್ಯಾಕ್‌’, ‘ಸಂಕಷ್ಟಕರ ಗಣಪತಿ’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ಲಿಖಿತ್‌ ಶೆಟ್ಟಿಗೆ ಈ ಬಾರಿ ಎನ್.ವಿನಾಯಕ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಖಿತ್‌, ‘ವಿನಾಯಕ್‌ ಅವರು ಕಥೆ ಹೇಳಿದಾಗ ನಾನು ಮೊದಲು ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಕಥೆ ಹೇಳಿ, ಅವರು ಒಪ್ಪಿಕೊಂಡರೆ ನನಗೆ ಒಪ್ಪಿಗೆಯಾದ ಹಾಗೆ ಎಂದಿದ್ದೆ. ಗುರುಕಿರಣ್ ಅವರು ಕಥೆ ಮೆಚ್ಚಿಕೊಂಡರು. ಅವರೇ ಸಂಗೀತವನ್ನು ನೀಡಲು ಒಪ್ಪಿಕೊಂಡರು. ನಾನೇ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ. ನಾನು ಈ ಚಿತ್ರದಲ್ಲಿ ವೆಡ್ಡಿಂಗ್‌ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದೇನೆ. ಹಾಗಾಗಿ ಫೋಟೋಗ್ರಾಫರ್ಸ್ ಮತ್ತು ಮೇಕಪ್ ಆರ್ಟಿಸ್ಟ್‌ಗಳಿಗಾಗಿ ವಿಶೇಷ ಪ್ರದರ್ಶನ ಆಯೋಜಿಸುತ್ತಿದ್ದೇವೆ’ ಎಂದರು.

‘ಇದೊಂದು ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರ. ಲಿಖಿತ್ ಶೆಟ್ಟಿ ಪಾತ್ರದ ಸುತ್ತವೇ ಸುತ್ತುವ ಕಥಾ ಹಂದರ ಚಿತ್ರದಲ್ಲಿದ್ದು, ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಕಥೆ, ಚಿತ್ರಕಥೆ ನಾನೇ ಬರೆದಿದ್ದೇನೆ’ ಎಂದರು ವಿನಾಯಕ್‌. 

ADVERTISEMENT

ಚಿತ್ರದಲ್ಲಿ ತೇಜಸ್ವಿನಿ ಶರ್ಮಾ ಹಾಗೂ ಖುಷಿ ರವಿ ನಾಯಕಿಯರಾಗಿ ಅಭಿನಯಿಸಿದ್ದಾರೆ‌. ವಿಜಯ್ ಚಂಡೂರ್, ಸೂರಜ್ ಲೋಕ್ರೆ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ರವಿಶಂಕರ್ ಗೌಡ, ಕೋಟೆ ಪ್ರಭಾಕರ್ ಹೀಗೆ ಅನೇಕ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಚಿತ್ರಗ್ರಹಣ ಹಾಗೂ ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.