ADVERTISEMENT

ಫೆಬ್ರುವರಿ 7ರಿಂದ ಗೇಮ್ ಚೇಂಜರ್ ಸಿನಿಮಾ ಈ ಒಟಿಟಿಯಲ್ಲಿ ಲಭ್ಯ

ಶಂಕರ್ ನಿರ್ದೇಶನದ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿರುವ ‘ಗೇಮ್ ಚೇಂಜರ್‘ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2025, 8:02 IST
Last Updated 5 ಫೆಬ್ರುವರಿ 2025, 8:02 IST
<div class="paragraphs"><p>ಶಂಕರ್ ನಿರ್ದೇಶನದ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿರುವ ‘ಗೇಮ್ ಚೇಂಜರ್‘ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.</p></div>

ಶಂಕರ್ ನಿರ್ದೇಶನದ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿರುವ ‘ಗೇಮ್ ಚೇಂಜರ್‘ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.

   

ಬೆಂಗಳೂರು: ಶಂಕರ್ ನಿರ್ದೇಶನದ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿರುವ ‘ಗೇಮ್ ಚೇಂಜರ್‘ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.

ಅಮೆಜಾನ್ ಪ್ರೈಂನಲ್ಲಿ ಫೆಬ್ರುವರಿ 7ರಿಂದ ವೀಕ್ಷಣೆಗೆ ಲಭ್ಯವಿದೆ. ಪ್ರೈಂ ಇಂಡಿಯಾ ಈ ಕುರಿತು ಮಾಹಿತಿ ಹಂಚಿಕೊಂಡಿದೆ.

ADVERTISEMENT

ಪೊಂಗಲ್ ಪ್ರಯುಕ್ತ ಜನವರಿ 10 ರಂದು ಬಿಡುಗಡೆಯಾಗಿದ್ದ ಗೇಮ್ ಚೇಂಜರ್ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಅದಾಗ್ಯೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಪಡೆದಿತ್ತು.

ಈ ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿ ತೆಲುಗು, ತಮಿಳಿನಲ್ಲಿ ದಿಲ್ ರಾಜು ಅವರು ನಿರ್ಮಾಣ ಮಾಡಿದ್ದರು. ಕನ್ನಡ, ಹಿಂದಿ, ಲಭ್ಯವಿದೆ.

ಗೇಮ್ ಚೇಂಜರ್ ಚಿತ್ರದಲ್ಲಿ ದ್ವಿಪಾತ್ರದಲ್ಲಿದ್ದ ರಾಮ್ ಚರಣ್ ಜೊತೆ ಕಿಯಾರಾ ಅಡ್ವಾಣಿ, ಸಮುದ್ರಕಿಣಿ, ಎಸ್‌.ಜೆ. ಸೂರ್ಯ, ಅಂಜಲಿ, ಶ್ರೀಕಾಂತ್, ಸುನೀಲ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ.

₹350 ಕೋಟಿಯಲ್ಲಿ ತಯಾರಾಗಿದ್ದ ಈ ಚಿತ್ರ ₹200 ಕೋಟಿಯನ್ನೂ ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿಲ್ಲ ಎಂದು ವರದಿಗಳು ಹೇಳಿವೆ. ಒಂದು ತಿಂಗಳೊಳಗೇ ಒಟಿಟಿಗೆ ಬಂದಿದೆ.

ಹಿಂದಿ ಅವತರಣಿಕೆ ಫೆಬ್ರುವರಿ 8 ರಂದು ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.