ಗೋಲ್ಡನ್ ಸ್ಟಾರ್ ಗಣೇಶ್ –ನಿಶ್ವಿಕಾ ನಾಯ್ಡು ಅಭಿನಯದ ‘ಸಖತ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಗಣೇಶ್ ನಟನೆಯ ಬಹುನಿರೀಕ್ಷಿತ ಚಿತ್ರ ಇದು. ಅಂಧನ ಪಾತ್ರದಲ್ಲಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಸುನಿ ಅವರ ಪರಿಕಲ್ಪನೆ, ಸಂಭಾಷಣೆ ಇದೆ. ಸಂಭಾಷಣೆಯ ತುಣುಕುಗಳು ನೋಡುಗರನ್ನು ನಗಿಸುತ್ತವೆ.
ಇದೊಂದು ಕಾಮಿಡಿ- ಕ್ರೈಮ್ ಥಿಲ್ಲರ್ ಶೈಲಿಯ ಸಿನಿಮಾ. ಟಿವಿ ರಿಯಾಲಿಟಿ ಶೋ, ಕೊಲೆ ಹಾಗೂ ಕೋರ್ಟ್ ಕೇಸ್ ಸುತ್ತ ಇಡೀ ಸಿನಿಮಾ ಸುತ್ತುತ್ತದೆ. ಸದ್ಯ ಅತ್ಯುತ್ತಮ ಕಾಮಿಡಿ ಟೀಸರ್ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ,ಈಗ ಬಿಡುಗಡೆಯಾಗಿರುವ ಟೀಸರ್.
ಕೆ ವಿ ಎನ್ ಪ್ರೊಡಕ್ಷನ್ ಲಾಂಛನದ ಅಡಿ ತಯಾರಾಗಿರುವ ‘ಸಖತ್’ ಸಿನಿಮಾಕ್ಕೆ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರೀತ್ ಬಂಡವಾಳ ಹೂಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ, ಶಾಂತಕುಮಾರ್ ಸಂಕಲನ, ಜ್ಯೂಡ ಸ್ಯಾಂಡಿ ಸಂಗೀತ ಈ ಸಿನಿಮಾಕ್ಕಿದೆ. ಈ ಚಿತ್ರ ನವೆಂಬರ್ 12ರಂದು ಥಿಯೇಟರ್ ಪ್ರವೇಶಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.