ADVERTISEMENT

AI ಬಳಸಿ ‘ಜೆನೆಸಿಸ್’ ಹೆಸರಿನ ವಿಶ್ವದ ಮೊಟ್ಟ ಮೊದಲ ಸಿನಿಮಾ ಟ್ರೈಲರ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2023, 14:30 IST
Last Updated 2 ಆಗಸ್ಟ್ 2023, 14:30 IST
   

ಹಾಲಿವುಡ್‌ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಮೊತ್ತ ಮೊದಲ ಸಿನಿಮಾ ಟ್ರೈಲರ್ ನಿರ್ಮಾಣ ಮಾಡಿ ಬಿಡುಗಡೆ ಮಾಡಲಾಗಿದೆ.

ಐಟಿ ತಂತ್ರಜ್ಞ ನಿಕೊಲಸ್ ನ್ಯೂಬರ್ಟ್ ಎಂಬುವರು ‘ಜೆನೆಸಿಸ್’ ಹೆಸರಿನ ವಿಶ್ವದ ಮೊತ್ತ ಮೊದಲ ಎಐ ಜೆನೆರೇಟೆಡ್ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಫೋಕ್ಸ್​ವ್ಯಾಗನ್ ಕಂಪನಿಯಲ್ಲಿ ಸೀನಿಯರ್ ಪ್ರಾಡಕ್ಟ್ ಡಿಸೈನರ್ ಆಗಿರುವ ನಿಕೋಲಸ್ ಕೆಲವೇ ಗಂಟೆಗಳ ಪ್ರಯತ್ನದಲ್ಲಿ ಈ ಅದ್ಭುತವಾದ ಸಿನಿಮಾ ಟ್ರೈಲರ್ ನಿರ್ಮಾಣ ಮಾಡಿರುವುದಾಗಿ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ADVERTISEMENT

ಇದಕ್ಕಾಗಿ ಹತ್ತಾರು ಆ್ಯಪ್‌ಗಳು, ಎಐ ತಂತ್ರಜ್ಞಾನ ಹಾಗೂ ಕೆಲವು ಕಂಪ್ಯೂಟರ್​ಗಳನ್ನು ಬಳಸಿ ಈ ಟ್ರೈಲರ್‌ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ. ತಾವು ಬಳಸಿರುವ ಅಪ್ಲಿಕೇಶನ್‌ಗಳ ಮಾಹಿತಿಯನ್ನು ಟ್ವೀಟ್‌ ಮೂಲಕ ನೀಡಿದ್ದಾರೆ. 

ನಿಕೊಲಸ್ ನ್ಯೂಬರ್ಟ್ ಮುಖ್ಯವಾಗಿ ಮಿಡ್​ಜರ್ನಿ ಹಾಗೂ ರನ್​ವೇ ಎಂಬ ಎಐ ಟೂಲ್​ಗಳನ್ನು ಬಳಕೆ ಮಾಡಿದ್ದಾರೆ. ಜೊತೆಗೆ ಕ್ಯಾಪ್​ಕಟ್ ಅಪ್ಲಿಕೇಶನ್ ಬಳಸಿ ಎಡಿಟ್ ಮಾಡಿದ್ದಾರೆ. ಹಾಗೂ ಹಿನ್ನೆಲೆ ಸಂಗೀತಕ್ಕೆ ಪಿಕ್ಸಾಬೇ ಹಾಗೂ ಸ್ಟ್ರಿಂಗ್ ಬೆಲ್ ಅಪ್ಲಿಕೇಶನ್​ಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆ ಮೂಲಕ ಸೃಜಿಸಿರುವ ಈ ಟ್ರೈಲರ್​ ‘ಸ್ಟಾರ್ ವಾರ್ಸ್’, ‘ಅವೇಂಜರ್ಸ್’ ಸಿನಿಮಾಗಳನ್ನು ನೆನಪಿಸುವ ರೀತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.