ADVERTISEMENT

ಒಂದೇ ದಿನದಲ್ಲಿ 33 ಮಿಲಿಯನ್ ವೀಕ್ಷಣೆ ಕಂಡ ಬೀಸ್ಟ್‌ ಟ್ರೈಲರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಏಪ್ರಿಲ್ 2022, 5:30 IST
Last Updated 4 ಏಪ್ರಿಲ್ 2022, 5:30 IST
ಬೀಸ್ಟ್‌
ಬೀಸ್ಟ್‌    

ಬೆಂಗಳೂರು:ತಮಿಳು ನಟ ದಳಪತಿ ವಿಜಯ್‌ ಅವರ ’ಬೀಸ್ಟ್‌‘ ಸಿನಿಮಾದ ಟ್ರೈಲರ್ ನಿನ್ನೆ ಸನ್‌ ಪಿಕ್ಚರ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ 33 ಮಿಲಿಯನ್ ವೀಕ್ಷಣೆ ಆಗಿದೆ.

ಸನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್‌ ದಿಲೀಪ್‌ಕುಮಾರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪೂಜಾ ಹೆಗ್ಡೆ ಮತ್ತು ವಿಜಯ್‌ ಜೊತೆಯಾಗಿ ನಟಿಸುತ್ತಿದ್ದಾರೆ.

ಟ್ರೈಲರ್‌ನಲ್ಲಿ ಮಾಲ್‌ ಒಂದನ್ನು ಉಗ್ರರು ಹೈಜಾಕ್ ಮಾಡಿರುವಾಗ ಜನರನ್ನು ಉಗ್ರರ ಕೈಯಿಂದ ಬಿಡುಗಡೆ ಮಾಡುವ ಯೋಧನ ಪಾತ್ರವನ್ನು ವಿಜಯ್ ನಿರ್ವಹಿಸಿದಂತೆ ತೋರುತ್ತಿದೆ.. ತೀವ್ರ ಕುತೂಹಲ ಕೆರಳಿಸುದ ಬೀಸ್ಟ್‌ ವಿಜಯ್ ಅವರ 65 ನೇ ಚಿತ್ರವಾಗಿದೆ.

ADVERTISEMENT

ಇನ್ನು ಬೀಸ್ಟ್ ಸಿನಿಮಾ ಕೂಡ ಏಪ್ರಿಲ್ 13 ರಂದು ಬಿಡುಗಡೆಯಾಗುತ್ತಿದೆ. ಒಂದು ದಿನ ತಡವಾಗಿ ಅಂದರೆ ಏಪ್ರಿಲ್ 14 ರಂದು ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಲಿದೆ. ಬಾಕ್ಸ್‌ ಆಫೀಸ್‌ನಲ್ಲಿ ಎರಡೂ ಚಿತ್ರಗಳಿಗೆ ಘರ್ಷಣೆ ಏರ್ಪಡಲಿದೆ ಎಂದು ಸಿನಿಮಾ ತಜ್ಞರು ಹೇಳುತ್ತಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಬಿಡುಗಡೆಯಾದ ದಿನ ಬೀಸ್ಟ್ ನಿರ್ದೇಶಕ ನೆಲ್ಸನ್ ಟ್ರೈಲರ್‌ಗೆ ಶುಭ ಕೋರಿದ್ದರು. ತಾವು ಚಿತ್ರ ನೋಡಲು ಕಾತರರಾಗಿದ್ದೇವೆ ಎಂದಿದ್ದರು. ಇನ್ನು ನಟ ಯಶ್ ಕೂಡ ಬೀಸ್ಟ್‌ ಸಿನಿಮಾಕ್ಕೆ ಶುಭಾಶಯ ಕೋರಿದ್ದರು.

ಕೆಜಿಎಫ್ ಚಾಪ್ಟರ್ 2 ನಿರ್ದೇಶಕ ಪ್ರಶಾಂತ್ ನೀಲ್ ನೆಲ್ಸನ್ ಅವರಿಗೆ ಶುಭಾಶಯ ಹೇಳಿದ್ದು, ಬೀಸ್ಟ್‌ ಚಿತ್ರ ವೀಕ್ಷಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ ಎರಡು ದೊಡ್ಡ ಚಿತ್ರಗಳು ಹಿಂದೆ ಮುಂದೆ ಬಿಡುಗಡೆಯಾಗುತ್ತಿರುವುದು ಯಾವ ಚಿತ್ರಕ್ಕೆ ಹೊಡೆತ ಬೀಳಲಿದೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.