ADVERTISEMENT

‘ನಾಟು ನಾಟು’ ಗೀತೆ ರಚನೆಕಾರ ಯಾರು?: ವಿಜಯೇಂದ್ರ ಪ್ರಸಾದ್ ಎಂದರೆ ಗೋಯಲ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮಾರ್ಚ್ 2023, 8:58 IST
Last Updated 14 ಮಾರ್ಚ್ 2023, 8:58 IST
ಪೀಯೂಷ್ ಗೋಯಲ್
ಪೀಯೂಷ್ ಗೋಯಲ್    

ನವದೆಹಲಿ: ಆಸ್ಕರ್ ಪ್ರಶಸ್ತಿ ಜಯಿಸಿದ ‘ಆರ್‌ಆರ್‌ಆರ್’ಸಿನಿಮಾದ ‘ನಾಟು ನಾಟು’ ಗೀತೆರಚನೆಕಾರ ಚಂದ್ರ ಬೋಸ್. ಆದರೆ, ಇತ್ತೀಚೆಗೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಚಿತ್ರಕಥೆಗಾರ ವಿ ವಿಜಯೇಂದ್ರ ಪ್ರಸಾದ್ ಅವರನ್ನು ನಾಟು ನಾಟು ಗೀತರಚನೆಕಾರ ಎಂದು ಹೇಳುವ ಮೂಲಕ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಪೇಚಿಗೆ ಸಿಲುಕಿದ್ದಾರೆ.

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಗೋಯಲ್, ‘ನಾಟು ನಾಟು’ ಗೀತೆರಚನೆಕಾರ ನಮ್ಮ ರಾಜ್ಯಸಭಾ ಸಹೋದ್ಯೋಗಿ(ವಿಜಯೇಂದ್ರ ಪ್ರಸಾದ್ ಅವರ ಬಗ್ಗೆ) ಎಂದು ಹೇಳಿದರು. ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ, ಗೌರವ ಮತ್ತು ಘನತೆಯನ್ನು ತಂದುಕೊಟ್ಟ ಆ ಹೆಸರುಗಳನ್ನು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ನಾಮಕರಣ ಮಾಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದರು.

ಅತ್ಯುತ್ತಮ ಸಾಕ್ಷ್ಯಚಿತ್ರ ಕಿರು ವಿಭಾಗದಲ್ಲಿ ಆಸ್ಕರ್ ಗೆದ್ದ ‘ದಿ ಎಲಿಫೆಂಟ್ ವಿಸ್ಪರರ್ಸ್’ಎಂಬ ಸಾಕ್ಷ್ಯಚಿತ್ರದ ತಯಾರಕರನ್ನು ಗೋಯಲ್ ಅಭಿನಂದಿಸಿದರು. ಆದರೆ, ಅದನ್ನು 'ಎಲಿಫೆಂಟ್ ವಿಸ್ಪರಿಂಗ್' ಎಂದು ತಪ್ಪಾಗಿ ಕರೆದರು. ‘ಎಲಿಫೆಂಟ್ ವಿಸ್ಪರಿಂಗ್' ಎಂಬ ಸಾಕ್ಷ್ಯಚಿತ್ರಕ್ಕಾಗಿ ಇಬ್ಬರು ಭಾರತೀಯ ಮಹಿಳೆಯರು ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ’ ಎಂದು ಅವರು ಹೇಳಿದ್ದರು.

ADVERTISEMENT

ಗೋಯಲ್ ಅವರ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಲೋಕಸಭೆಯ ಕಾಂಗ್ರೆಸ್ ಸಚೇತಕ ಮತ್ತು ವಿರುದುನಗರ (ತಮಿಳುನಾಡು) ಸಂಸದ ಮಾಣಿಕಂ ಟ್ಯಾಗೋರ್, ಗೋಯಲ್ ಅವರು ಗೀತರಚನೆಕಾರ ಮತ್ತು ಚಿತ್ರಕಥೆಗಾರನ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು? ಎಂದು ಒತ್ತಿ ಹೇಳಿದರು. ಗೋಯಲ್ ಅವರ ಹೇಳಿಕೆ ಎಲ್ಲದರಲ್ಲೂ ಲಾಭ ಪಡೆದುಕೊಳ್ಳುವ ಮನೋಭಾವವಾಗಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.