ADVERTISEMENT

’ಹುಟ್ಟುಹಬ್ಬದ ಶುಭಾಶಯಗಳು’: 38ನೇ ವರ್ಷದ ಸಂಭ್ರಮದಲ್ಲಿ ನಟ ದಿಗಂತ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 7:42 IST
Last Updated 28 ಡಿಸೆಂಬರ್ 2021, 7:42 IST
ದಿಗಂತ್‌
ದಿಗಂತ್‌   

ಬೆಂಗಳೂರು: ಚಂದನವನದ ನಟ ’ದೂದ್‌ ಪೇಡ’ ಖ್ಯಾತಿಯ ನಟ ದಿಗಂತ್‌ ಅವರಿಗೆ ಇಂದು (ಡಿ.28) ಹುಟ್ಟುಹಬ್ಬದ ಸಂಭ್ರಮ.

38ನೇ ವರ್ಷದ ಜನ್ಮದಿನಸಂಭ್ರಮದಲ್ಲಿರುವ ದಿಗಂತ್‌ ಅವರಿಗೆ ಅಭಿಮಾನಿಗಳು ಸೇರಿದಂತೆ ಚಂದನವನದ ನಟ, ನಟಿಯರು ತಂತ್ರಜ್ಞರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ದಿಗಂತ್‌ ಪತ್ನಿ ನಟಿ ಐಂದ್ರಿತಾ ರೈ ಕೂಡ ಜನ್ಮದಿನದ ಶುಭಾಶಯ ಹೇಳಿದ್ದಾರೆ. ಚಂದನವನದಲ್ಲಿ ಸಕ್ರಿಯರಾಗಿರುವ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ, ‘ಮುಂಗಾರು ಮಳೆ’, ‘ಗಾಳಿಪಟ’, ‘ಮನಸಾರೆ’, ‘ಪಂಚರಂಗಿ’ ಚಿತ್ರಗಳು ಅವರಿಗೆ ಯಶಸ್ಸು ತಂದುಕೊಟ್ಟ ಸಿನಿಮಾಗಳು.

ADVERTISEMENT

ಸದ್ಯ ದಿಗಂತ್‌ ಅವರ ’ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾ ಡಿಸೆಂಬರ್‌ 31ರಂದು ತೆರೆಗೆ ಬರಲಿದೆ. ಚಿತ್ರಕ್ಕೆ ನಾಗರಾಜ್ ಬೇತೂರು ನಿರ್ದೇಶನವಿದೆ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.