ADVERTISEMENT

‘ಆರ್‌ಆರ್‌ಆರ್‌’ ಆಸ್ಕರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆಲ್ಲುತ್ತೆ: ಜೇಸನ್ ಬ್ಲಮ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2023, 6:54 IST
Last Updated 10 ಜನವರಿ 2023, 6:54 IST
   

ಬೆಂಗಳೂರು: ಖ್ಯಾತ ನಿರ್ದೆಶಕ ರಾಜಮೌಳಿ ನಿರ್ದೇಶನದ ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ ‘ಆರ್‌ಆರ್‌ಆರ್‌’ ಆಸ್ಕರ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಜಯಿಸಲಿದೆ ಎಂದು ಹಾಲಿವುಡ್ ನಿರ್ಮಾಪಕ ಜೇಸನ್ ಬ್ಲಮ್ ಹೇಳಿದ್ದಾರೆ.

2022ರ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ಜ್ಯೂ. ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ‘ಆರ್‌ಆರ್‌ಆರ್’ಸಿನಿಮಾವನ್ನು ಅಮೆರಿಕದ ಹಲವು ಚಿತ್ರ ವಿಮರ್ಶಕರು ಹೆಸರಿಸಿದ್ಧಾರೆ.

ಕಳೆದ ಜೂನ್‌ನಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (ಎಎಂಪಿಎಎಸ್‌) ನ ನಿರ್ಮಾಪಕರ ವಿಭಾಗದ ಸದಸ್ಯರಾಗಿರುವ ಜೇಸನ್, ಟ್ವಿಟರ್‌ನಲ್ಲಿ, ‘ನಾನು ಆರ್‌ಆರ್‌ಆರ್‌ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆಲ್ಲುತ್ತದೆ ಎಂದು ಹೇಳುತ್ತೇನೆ. ನನ್ನ ನಿಲುವು ಸರಿಯಾಗಿದ್ದರೆ ಬೆಂಬಲಿಸಿ. ನಾನು ನನ್ನ ಆಸ್ಕರ್ ಅನ್ನು ಆರ್‌ಆರ್‌ಆರ್‌ಗೆ ನೀಡುತ್ತಿದ್ದೇನೆ’ಎಂದು ಹೇಳಿಕೊಂಡಿದ್ದಾರೆ. ಬ್ಲಮ್ ಅವರ ಬ್ಲಮ್ ಹೌಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯ ಹೊಸ ಹಾರರ್ ಚಿತ್ರ M3GAN ಇದೇ 13ರಂದು ಭಾರತದಲ್ಲಿ ತೆರೆ ಕಾಣಲಿದೆ.

ADVERTISEMENT

ಅಮೆರಿಕದ ಒಬ್ಬ ವಿಮರ್ಶಕರು ಸಹ ಜೇಸನ್ ಅಭಿಪ್ರಾಯಕ್ಕೆ ದನಿಗೂಡಿಸಿದ್ದಾರೆ. ಜೇಸನ್ ಅವರ ಈ ಅಭಿಪ್ರಾಯವನ್ನು ನಾನು ಶೇಕಡ 100ರಷ್ಟು ಒಪ್ಪುತ್ತೇನೆ. ಚಿತ್ರ ಬಿಡುಗಡೆ ಆದ ಸಂದರ್ಭದಿಂದಲೂ ಇತರೆ ಸಿನಿಮಾಗಳ ರೀತಿಯೇ ಇದು ಜನರ ಗಮನ ಸೆಳೆಯುತ್ತಿದೆ. ರೋಚಕತೆ ಉಳಿಸಿಕೊಂಡಿದೆ. ಅತ್ಯುತ್ತಮ ಅನುಭವ ನೀಡಿರುವ ಈ ಚಿತ್ರ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ಬಹುಮತ ಗಿಟ್ಟಿಸಲಿದೆ ಎಂದಿದ್ದಾರೆ.

ಬ್ಲಮ್ ಅವರ ಬೆಂಬಲವನ್ನು ಶ್ಲಾಘಿಸಿರುವ ಆರ್‌ಆರ್‌ಆರ್‌ ಚಿತ್ರ ತಂಡ ಟ್ವಿಟರ್ ಮೂಲಕ ಧನ್ಯವಾದ ಹೇಳಿದೆ. ನಾವು ನಿಮ್ಮ ಮನಸ್ಸು ಗೆದ್ದಿದ್ಧೇವೆ ಬ್ಲಮ್!.ನಿಮ್ಮ ಒಳ್ಳೆಯ ನುಡಿಗಳಿಗೆ ಧನ್ಯವಾದಗಳು ಎಂದು ಹೇಳಿ ಕೆಂಪು ಎಮೋಜಿ ಪೋಸ್ಟ್ ಮಾಡಲಾಗಿದೆ.

ಕಳೆದ ಕೆಲ ವಾರಗಳಿಂದ ಜೆಸ್ಸಿಕಾ ಚಸ್ಟೈನ್, ಮಿಂಗ್ ನಾ ಚವೆನ್ ಸೇರಿದಂತೆ ಹಾಲಿವುಡ್‌ನ ಹಲವು ಸೆಲೆಬ್ರಿಟಿಗಳಿಂದ ಆರ್‌ಆರ್‌ಆರ್‌ ಪ್ರಶಂಸೆ ಪಡೆದುಕೊಂಡಿದೆ. ಕೊನೆಗೂ ಈ ಅದ್ಬುತ ಸಿನಿಮಾ ನೋಡಿದೆ ಎಂದು ಜೆಸ್ಸಿಕಾ ಹೇಳಿದರೆ, ಕೊನೆಗೂ ಈ ಅತ್ಯುತ್ತಮ ಸಿನಿಮಾ ಅನುಭವದ #ಆರ್‌ಆರ್‌ಆರ್ ಅನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಿದೆ. ಈ ಚಿತ್ರವು ಎಲ್ಲ ಪ್ರಶಂಸೆಗಳಿಗೂ ಅರ್ಹವಾಗಿದೆ ಎಂದು ಮಿಂಗ್ ನಾ ಚವೆನ್ ಹೇಳಿದ್ದರು. ಅಲ್ಲದೆ, ಹೃದಯ ಮತ್ತು ಚಪ್ಪಾಳೆ ಹೊಡೆಯುವ ಎಮೋಜಿಗಳನ್ನು ಹರಿಬಿಟ್ಟಿದ್ದರು.

ಅತ್ಯುತ್ತಮ ಚಿತ್ರ, ಸಂಗೀತ, ನಿರ್ದೇಶಕ, ವಿಶುವಲ್ ಎಫೆಕ್ಟ್ಸ್, ಅತ್ಯುತ್ತಮ ನಟ ವಿಭಾಗಗಳಲ್ಲಿ ಆರ್‌ಆರ್‌ಆರ್‌ ಆಸ್ಕರ್‌ಗೆ ನಾಮಿನೇಟ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.