ADVERTISEMENT

ಸೆಟ್ಟೇರಿತು ‘ಒಂದು ಸುಂದರ ದೆವ್ವದ ಕಥೆ’

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 0:30 IST
Last Updated 20 ಜೂನ್ 2025, 0:30 IST
ಕೌರವ್‌ ವೆಂಕಟೇಶ್‌
ಕೌರವ್‌ ವೆಂಕಟೇಶ್‌   

ಸಾಹಸ ನಿರ್ದೇಶಕ ಕೌರವ್‌ ವೆಂಕಟೇಶ್‌ ನಾಯಕರಾಗಲು ಸಿದ್ಧರಾಗಿದ್ದಾರೆ. ಅವರ ನಟನೆಯ ‘ಒಂದು ಸುಂದರ ದೆವ್ವದ ಕಥೆ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಕಪಿಲ್ ಈ ಚಿತ್ರದ ನಿರ್ದೇಶಕ. ನೃತ್ಯ ನಿರ್ದೇಶಕರೂ ಆಗಿರುವ ಕಪಿಲ್‌ ಈ ಹಿಂದೆ ‘ದಾಸರಹಳ್ಳಿ’, ‘ದೇವದೂತ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದು ಅವರ ನಿರ್ದೇಶನದ ಹತ್ತನೇ ಚಿತ್ರ.

‘ಜೂನ್‌ ಅಂತ್ಯಕ್ಕೆ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ಮಾಡಲಾಗುವುದು. ಆರು ಜ‌ನ ಪ್ರತಿಭಾವಂತ ಹೆಣ್ಣುಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣವನ್ನು ಮೋಸದಿಂದ ಕಳೆದುಕೊಳ್ಳುತ್ತಾರೆ. ಅದೇ ಕಾಲೋನಿಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ನಾಯಕ ಈ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುತ್ತಾನೆ. ಹೇಗೆ ನ್ಯಾಯ ಕೊಡಿಸುತ್ತಾನೆ, ದೆವ್ವ ಹೇಗೆ ಬರುತ್ತದೆ ಎಂಬುದೇ ಚಿತ್ರಕಥೆ’ ಎಂದರು ನಿರ್ದೇಶಕರು.

ಶೋಭಾವತಿ ಕಪಿಲ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾಯಿಕೃಷ್ಣ ಹೆಬ್ಬಾಳ ಅವರ ಚಿತ್ರಕಥೆ, ಸಂಭಾಷಣೆ, ಹರ್ಷ ಕೊಗೋಡ್ ಸಂಗೀತ, ಶಂಕರ್ ಆರಾಧ್ಯ ಛಾಯಾಚಿತ್ರಗ್ರಹಣ, ವಿನಯ್ ಜಿ. ಆಲೂರು ಸಂಕಲನವಿದೆ. ಕೆ.ಟಿ. ಮುನಿರಾಜ್, ಆರ್.ಲಕ್ಷ್ಮೀನಾರಾಯಣ ಗೌಡ, ಗುರುಪ್ರಸಾದ್ ಮುಂತಾದವರು ಚಿತ್ರದಲ್ಲಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.