ADVERTISEMENT

ಹಾರರ್‌ ಕಥೆಯನ್ನು ಹೊಂದಿರುವ ‘ಒಮೆನ್’ ಶೀಘ್ರದಲ್ಲಿ ತೆರೆಗೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 0:30 IST
Last Updated 30 ಜೂನ್ 2025, 0:30 IST
ಅಜಯ್‌ ಕುಮಾರ್‌
ಅಜಯ್‌ ಕುಮಾರ್‌   

ಹಾರರ್‌ ಕಥೆಯನ್ನು ಹೊಂದಿರುವ ‘ಒಮೆನ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ವಿಬಿನ್‌.ಎಸ್‌ ಸಂತೋಷ್‌ ಕಥೆ ಬರೆದು ನಿರ್ದೇಶಿಸಿದ್ದಾರೆ.

‘ಒಂದು ಮನೆಯ ಸುತ್ತ ನಡೆಯುವಂಥ ಘಟನೆಯಿದು. ಭೂತ ಬಂಗಲೆಗೆ ಹೋದವರ ಕಥೆ ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ನಾಯಕ ಯೂಟ್ಯೂಬರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ಪ್ಯಾರಾನಾರ್ಮಲ್‌ ರಿಸರ್ಚರ್‌ ಆಗಿರುತ್ತಾಳೆ. ಸಿನಿಮಾ ಫೌಂಡ್‌ ಫುಟೇಜ್‌ ಶೈಲಿಯಲ್ಲಿದ್ದು, ನೇರವಾಗಿ ಒಂದು ಘಟನೆಯನ್ನು ವೀಕ್ಷಿಸುತ್ತಿರುವಂತಹ ಅನುಭವ ಪ್ರೇಕ್ಷಕರಿಗೆ ಆಗುತ್ತದೆ. ಸಿನಿಮಾದ ಸೆನ್ಸಾರ್ ಮುಗಿದಿದ್ದು, ಶೀಘ್ರದಲ್ಲಿಯೇ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು. 

ಅಜಯ್‌ ಕುಮಾರ್ ಮತ್ತು ವಿ.ಮಿರುನಳಿನಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಜಯ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನೀಶ್ಮಾ ಶೆಟ್ಟಿ ನಾಯಕಿ. ಉಳಿದಂತೆ ಮೈತ್ರಿ ಜಗ್ಗಿ, ಕೀರ್ತನ ಪುಲ್ಕಿ, ರಾಘು ಕಲಾವಿದ, ಆಕಾಶ್ ಕುಲಕರ್ಣಿ ಅಭಿನಯಿಸಿದ್ದಾರೆ. ಭುವನ್‌ ಶಂಕರ್‌, ಸನ್‌ಸ್ಕಾರ್‌ ಸಂಗೀತವಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.