ADVERTISEMENT

ಲಾಕ್‌ಡೌನ್‌ ಸಂಕಷ್ಟ | ಅನ್ನದಾಸೋಹಕ್ಕೆ ಹೃತಿಕ್ ರೋಷನ್ ಸಾಥ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 20:15 IST
Last Updated 9 ಏಪ್ರಿಲ್ 2020, 20:15 IST
ಹೃತಿಕ್ ರೋಷನ್
ಹೃತಿಕ್ ರೋಷನ್   

ಲಾಕ್‌ಡೌನ್‌ ಅವಧಿಯಲ್ಲಿ ಹೃತಿಕ್ ರೋಷನ್ ಮತ್ತು ಸುಸಾನ್‌ ತಾತ್ಕಾಲಿಕವಾಗಿ ಒಂದಾಗಿದ್ದಾರೆ ಎಂಬ ಸುದ್ದಿ ಕಳೆದ ವಾರ ಬಂದಿತ್ತು. ಈಗ ಹೃತಿಕ್ ಮನೆಯಿಂದ ಇನ್ನೊಂದು ಸುದ್ದಿ ಬಂದಿದೆ – ಆದರೆ ಇದು ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ್ದಲ್ಲ.

ಲಾಕ್‌ಡೌನ್‌ ಅವಧಿಯಲ್ಲಿ ಹಿರಿಯ ನಾಗರಿಕರಿಗೆ, ದಿನಗೂಲಿ ಕಾರ್ಮಿಕರಿಗೆ ಮತ್ತು ಕಡಿಮೆ ಆದಾಯ ಹೊಂದಿರುವ ಜನರಿಗೆ ಊಟ ಕೊಡುವ ಕಾಯಕದಲ್ಲಿಹೃತಿಕ್ ಅವರು ಕೈಜೋಡಿಸಿದ್ದಾರೆ. ಹೃತಿಕ್ ಅವರು ಒಟ್ಟು 1.2 ಲಕ್ಷ ಊಟ ಪೂರೈಸುವ ಹೊಣೆ ಹೊತ್ತುಕೊಂಡಿದ್ದಾರಂತೆ.

ಅಂದಹಾಗೆ, ಹೃತಿಕ್ ಅವರು ಕೈಜೋಡಿಸಿರುವುದು ಇಸ್ಕಾನ್‌ ಸಂಸ್ಥೆಯವರ ಅಕ್ಷಯ ಪಾತ್ರ ಪ್ರತಿಷ್ಠಾನದ ಜೊತೆ. ‘ನಮ್ಮ ಪ್ರತಿಷ್ಠಾನಕ್ಕೆ ಈಗ ಸೂಪರ್‌ಸ್ಟಾರ್‌ ಹೃತಿಕ್ ರೋಷನ್ ಅವರ ಬಲ ಬಂದಿದೆ ಎಂಬುದನ್ನು ಖುಷಿಯಿಂದ ಹೇಳಿಕೊಳ್ಳುತ್ತಿದ್ದೇವೆ. ಪರಿಸ್ಥಿತಿ ಮಾಮೂಲಿನಂತೆ ಆಗುವವರೆಗೆ ನಾವಿಬ್ಬರೂ ಜೊತೆಯಾಗಿ ಒಟ್ಟು 1.2 ಲಕ್ಷ ಊಟ ಪೂರೈಕೆ ಮಾಡುತ್ತೇವೆ’ ಎಂದು ಪ್ರತಿಷ್ಠಾನ ಹೇಳಿದೆ.

ADVERTISEMENT

‘ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುವುದನ್ನು ಮುಂದುವರಿಸೋಣ. ಯಾವ ದಾನವೂ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ’ ಎಂದು ಹೃತಿಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.