ADVERTISEMENT

ಶಾರುಕ್ ಖಾನ್‌, ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್‌: ಕಾರಣವೇನು?

ಪಿಟಿಐ
Published 28 ಆಗಸ್ಟ್ 2025, 10:07 IST
Last Updated 28 ಆಗಸ್ಟ್ 2025, 10:07 IST
<div class="paragraphs"><p>ಶಾರುಕ್‌ ಖಾನ್‌, ದೀಪಿಕಾ ಪಡುಕೋಣೆ</p></div>

ಶಾರುಕ್‌ ಖಾನ್‌, ದೀಪಿಕಾ ಪಡುಕೋಣೆ

   

ಚಿತ್ರಕೃಪೆ: IG/advaithhyundai

ಜೈಪುರ: ಹುಂಡೈನ ಅಲ್ಕಾಜಾರ್ ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಬಗ್ಗೆ ಕಾರಿನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆ ಕಂಪನಿಯ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿರುವ ಬಾಲಿವುಡ್‌ ನಟ ಶಾರುಕ್‌ ಖಾನ್‌, ನಟಿ ದೀಪಿಕಾ ಪಡುಕೋಣೆ ಮತ್ತು ಇತರರ ವಿರುದ್ಧ ರಾಜಸ್ಥಾನ ಭರತ್‌ಪುರ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ.

ADVERTISEMENT

ವಕೀಲ ಕೀರ್ತಿ ಸಿಂಗ್ ಅವರು ನೀಡಿದ ದೂರಿನ ಮೇಲೆ ಮಥುರಾ ಗೇಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 2022ರಲ್ಲಿ ಸೋನಿಪತ್‌ನ ಡೀಲರ್‌ ಒಬ್ಬರಿಂದ ₹23.97 ಲಕ್ಷ ಕೊಟ್ಟು ಕಾರು ಖರೀದಿಸಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕಾರು ಖರೀದಿಸಿದ ಸ್ವಲ್ಪ ದಿನಗಳಲ್ಲೇ ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಎಷ್ಟೋ ಬಾರಿ ನನ್ನ ಮತ್ತು ನನ್ನ ಕುಟುಂಬದ ಪ್ರಾಣಕ್ಕೂ ಇದರಿಂದ ಸಂಚಕಾರ ಬಂದಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಂತ್ರಿಕ ದೋಷದ ಬಗ್ಗೆ ಡೀಲರ್‌ಗೆ ತಿಳಿಸಿದ್ದು, ಇದು ಕಂಪನಿಯ ಕಡೆಯಿಂದ ಆಗಿರುವ ತಪ್ಪೆಂದು ಅವರು ತಿಳಿಸಿದ್ದಾರೆ. ತಾತ್ಕಾಲಿಕ ಪರಿಹಾರ ಸೂಚಿಸಿ ನುಣುಚಿಕೊಂಡಿದ್ದಾರೆ ಎಂದು ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಇದರಿಂದ ಹಣ ಕಳೆದುಕೊಳ್ಳುತ್ತಿರುವುದಲ್ಲದೇ ನಾನು ಮತ್ತು ನನ್ನ ಕುಟುಂಬ ಮಾನಸಿಕ ನೋವು ಅನುಭವಿಸಿದ್ದೆವೆ’ ಎಂದು ಹೇಳಿದ್ದಾರೆ.

ಕಂಪನಿ, ಅದರ ಡೀಲರ್‌ಗಳು ಮತ್ತು ಬ್ರ್ಯಾಂಡ್ ಅಂಬಾಸಿಡರ್‌ಗಳಿಗೆ ಈ ಬಗ್ಗೆ ತಿಳಿದಿದ್ದು, ಅದನ್ನು ಮರೆಮಾಚಿದ್ದಾರೆ ಎಂದು ಸಿಂಗ್‌ ಆರೋಪಿಸಿದ್ದಾರೆ. ಇದು ವಂಚನೆ ಮತ್ತು ನಂಬಿಕೆ ದ್ರೋಹವಾಗಿದೆ ಎಂದು ಹೇಳಿದ್ದಾರೆ.

ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.