
ಪ್ರಜಾವಾಣಿ ವಾರ್ತೆ
ನಟ ಉಪೇಂದ್ರ ಅವರ ಜೊತೆ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರವಿಗೌಡ ನಟಿಸಿ, ನಿರ್ದೇಶಿಸಿರುವ ‘ಐ ಆ್ಯಮ್ ಗಾಡ್’ ಸಿನಿಮಾ ನ.7ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಉಪೇಂದ್ರ ಚಿತ್ರದ ಟ್ರೇಲರ್ ರಿಲೀಸ್ ಮಾಡಿದರು.
ರವಿಗೌಡ ಅವರೇ ನಿರ್ಮಿಸಿರುವ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಪ್ರೇಮಕಥೆಯಾಗಿದೆ. ಉಪೇಂದ್ರ ಅವರ ಗರಡಿಯಲ್ಲಿ ಕೆಲಸ ಮಾಡಿದ ಕಾರಣ ಉಪೇಂದ್ರ ಅವರ ಸಿನಿಮಾ ಶೈಲಿಯನ್ನು ‘ಐ ಆ್ಯಮ್ ಗಾಡ್’ನಲ್ಲೂ ಕಾಣಬಹುದಾಗಿದೆ. ರವಿಗೌಡಗೆ ನಾಯಕಿಯಾಗಿ ವಿಜೇತಾ ನಟಿಸಿದ್ದಾರೆ. ರವಿಶಂಕರ್, ಅವಿನಾಶ್, ಅರುಣ ಬಾಲರಾಜ್ ಹಾಗೂ ನಿರಂಜನ್ ಕುಮಾರ್ ತಾರಾಬಳಗದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಜಿತಿನ್ ದಾಸ್ ಛಾಯಾಚಿತ್ರಗ್ರಹಣ ಸಿನಿಮಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.