ADVERTISEMENT

ವಿರೋಧಿಗಳನ್ನು ನೋಡಲಾಗುತ್ತಿಲ್ಲ, ಅದಕ್ಕೆ ಕಣ್ಣು ಮುಚ್ಚಿಕೊಂಡಿದ್ದೇನೆ: ಇಲಿಯಾನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2021, 8:27 IST
Last Updated 12 ಡಿಸೆಂಬರ್ 2021, 8:27 IST
ಇಲಿಯಾನಾ ಡಿಕ್ರೂಜ್ ಹೊಸ ಫೋಟೊ ಪೋಸ್ಟ್
ಇಲಿಯಾನಾ ಡಿಕ್ರೂಜ್ ಹೊಸ ಫೋಟೊ ಪೋಸ್ಟ್   

ಬೆಂಗಳೂರು: ನಟಿ ಇಲಿಯಾನಾ ಡಿಕ್ರೂಜ್ ಇತ್ತೀಚೆಗೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದು, ಅಲ್ಲಿಂದ ವಿವಿಧ ಪೋಸ್‌ನ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದರು.

ಇಲಿಯಾನಾ ಅವರ ಬೀಚ್ ಮೋಹ ಅಭಿಮಾನಿಗಳಿಗೆ ಕೂಡ ಇಷ್ಟವಾಗಿತ್ತು. ಅದಕ್ಕೆ ಪೂರಕವಾಗಿ ಅವರು ಹಲವು ಫೋಟೊಗಳನ್ನು ಹಂಚಿಕೊಂಡಿದ್ದರು.

ವೀಕೆಂಡ್ ಮೂಡ್ ಎನ್ನುವ ಹೆಸರಿನಲ್ಲಿ ಬೀಚ್‌ನಲ್ಲಿ ಇರುವ ಫೋಟೊಗಳನ್ನು ಇಲಿಯಾನಾ ಪೋಸ್ಟ್ ಮಾಡಿದ್ದಾರೆ.

ADVERTISEMENT

ಅದರ ಜತೆಗೇ, ಮತ್ತೊಂದು ಫೋಟೊ ಪೋಸ್ಟ್ ಮಾಡಿರುವ ಅವರು, ಅದರಲ್ಲಿ ಕಣ್ಣು ಮುಚ್ಚಿಕೊಂಡಿದ್ದಾರೆ. ಅದಕ್ಕೆ ನನಗೆ ನನ್ನ ವಿರೋಧಿಗಳನ್ನು ನೋಡಲಾಗುತ್ತಿಲ್ಲ, ಹೀಗಾಗಿ ಕಣ್ಣು ಮುಚ್ಚಿಕೊಂಡಿದ್ದೇನೆ ಎಂದು ಅಡಿಬರಹ ನೀಡಿದ್ದಾರೆ.

ಇಲಿಯಾನಾ ಅವರ ಪೋಸ್ಟ್ ಅನ್ನು ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.