ಅನಂತನಾಗ್
ಬೆಂಗಳೂರು: ಭಾರತೀಯ ವಿದ್ಯಾಭವನ ಮತ್ತು ಸುಚಿತ್ರ ಫಿಲಂ ಸೊಸೈಟಿಯು ಸೆಪ್ಟೆಂಬರ್ 13, 14 ಹಾಗೂ 15ರಂದು 'ಅನಂತನಾಗ್ ಉತ್ಸವ' ಆಯೋಜಿಸಿದೆ.
ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಇ.ಎಸ್.ವಿ ಸಭಾಂಗಣ ಮತ್ತು ಬನಶಂಕರಿ ಎರಡನೇ ಹಂತ, ಬಿ.ವಿ.ಕಾರಂತ ರಸ್ತೆಯಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ 'ಪ್ರಜಾವಾಣಿ' ಸಹಯೋಗದೊಂದಿಗೆ 'ಅನಂತನಾಗ್ ಉತ್ಸವ' ನಡೆಯಲಿದೆ. ಈ ವೇಳೆ ನಟ ಅನಂತನಾಗ್ ಅವರ ಸಿನಿಮಾಗಳ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ.
ಸೆ.13ರಂದು ಉತ್ಸವಕ್ಕೆ ಚಾಲನೆ ಸಿಗಲಿದ್ದು, ಅದೇ ದಿನ ವಿಚಾರ ಸಂಕಿರಣ ನಡೆಯಲಿದೆ. ಸೆ.15ರಂದು ಅನಂತನಾಗ್ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ.
ಅನಂತನಾಗ್ ಅಭಿನಯದ ಅಂಕುರ್ (ಹಿಂದಿ) ಸೆ.13ರಂದು, ಕನ್ನಡದ ಬರ ಹಾಗೂ ಹಂಸಗೀತೆ ಸೆ.14ರಂದು ಹಾಗೂ ಸ್ಟಂಬಲ್ (ಇಂಗ್ಲಿಷ್) ಸೆ.15ರಂದು ಭಾರತೀಯ ವಿದ್ಯಾಭವನದಲ್ಲಿ ಪ್ರದರ್ಶನಗೊಳ್ಳಲಿವೆ.
ಹಂಸಗೀತೆ ಹಾಗೂ ಅಂಕುರ್ ಚಿತ್ರಗಳು ಸುಚಿತ್ರ ಫಿಲಂ ಸೊಸೈಟಿಯಲ್ಲಿ ಸೆ.13 ಹಾಗೂ 14ರಂದು ಪ್ರದರ್ಶನಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.