ADVERTISEMENT

‘ಇನ್‌’ ಟೀಸರ್‌ ನೋಡಿ ಖುಷಿಪಟ್ಟ ಸುದೀಪ್‌

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 9:07 IST
Last Updated 4 ಏಪ್ರಿಲ್ 2022, 9:07 IST
ಪಾವನಾ ಗೌಡ, ಕಿಚ್ಚ ಸುದೀಪ್‌
ಪಾವನಾ ಗೌಡ, ಕಿಚ್ಚ ಸುದೀಪ್‌   

ಇಡೀ ತೆರೆಯ ಮೇಲೆ ಒಂಟಿ ಮಹಿಳೆ. ಭಯ, ಆತಂಕ, ಕೋಪ ಎಲ್ಲದರ ಅಭಿವ್ಯಕ್ತಿ....

ಇದು ‘ಇನ್‌’ ಚಿತ್ರದ ಟೀಸರ್‌ನಲ್ಲಿ ಕಾಣುವ ದೃಶ್ಯ. ಈ ಟೀಸರನ್ನು ಕಿಚ್ಚ ಸುದೀಪ್‌ ಬಿಡುಗಡೆಗೊಳಿಸಿದ್ದಾರೆ. ಟೀಸರ್‌ ನೋಡಿದ ಕಿಚ್ಚ ಖುಷಿಯಾಗಿದ್ದಾರಂತೆ. ಚಿತ್ರತಂಡದ ಬೆನ್ನು ತಟ್ಟಿದ್ದಾರೆ.

ನಿರ್ದೇಶಕ ಬಡಿಗೇರ್ ದೇವೇಂದ್ರ ಅವರು, ‘ನನ್ನ ಮೊದಲ ಚಿತ್ರ ‘ರುದ್ರಿ’ಯೂ ಮಹಿಳಾ ಪ್ರಧಾನವಾಗಿತ್ತು. ಈಗ ನಿರ್ದೇಶಿಸಿರುವ ‘ಇನ್’ ಚಿತ್ರವೂ ಮಹಿಳಾ ಪ್ರಧಾನವಾಗಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸಿದ್ದವಾಗಿರುವ ಇದೊಂದು ಪ್ರಯೋಗಾತ್ಮಕ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಈ ರೀತಿಯ ಪ್ರಯತ್ನ ನಡೆದಿರುವ ಉದಾಹರಣೆ ಕಡಿಮೆ’ ಎಂದರು.

ADVERTISEMENT

ಈ ಚಿತ್ರದ ಫಸ್ಟ್ ಲುಕ್‌ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದರು.

ಚಿತ್ರದ ನಾಯಕಿ ಪಾವನಾ ಗೌಡ, ‘ಇನ್’ ಚಿತ್ರ ಅತ್ಯಂತ ವಿಭಿನ್ನವಾಗಿದ್ದು, ಇಡೀ ಚಿತ್ರದ ತುಂಬ ನಾನೊಬ್ಬಳೇ ತೆರೆಯ ಮೇಲೆ ಬರುವುದು ಇದೆ. ಇದೊಂದು ದೊಡ್ಡ ಸವಾಲಿನ ಚಿತ್ರ. ಈ ಚಿತ್ರವನ್ನು ಜನರು ಇಷ್ಟಪಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು.

ಐಡಿಯಾ ಮೋಷನ್ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪ್ರಶಾಂತ ಅಯ್ಯಂಗಾರಿ ನಿರ್ಮಾಪಕರು. ದೀಪಕ್‌ ದುರ್ಗಾಯಿ, ಕರವೀರ ಸಂಗೊಳ್ಳಿ, ಸಹದೇವ ಪಾಗೋಜಿ, ನಾಗಪ್ಪ ಓಮನ್ನವರ, ಧನರಾಜ ಬಡಿಗೇರ, ಸಂಜೋತಾ ಪಾಗೋಜಿ ಸೇರಿ ಐದಾರು ಜನ ಸ್ನೇಹಿತರು ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಭರತ್ ನಾಯಕ್ ಸಂಗೀತ ನೀಡಿದ್ದು, ಸಾಹಿತ್ಯ ಬಡಿಗೇರ್ ದೇವೇಂದ್ರ, ಶಂಕರ ಪಾಗೋಜಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.