ADVERTISEMENT

ರಿಷಭ್ ಪಂತ್ ವೈಫಲ್ಯಕ್ಕೆ ನಟಿ ಊರ್ವಶಿ ಕಾರಣ!: ಟ್ರೋಲ್ ಆಯ್ತು ಕ್ರಿಕೆಟಿಗನ ಸೆಲ್ಫಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 12:38 IST
Last Updated 13 ಡಿಸೆಂಬರ್ 2019, 12:38 IST
ಪಂತ್‌ ಮತ್ತು ಊರ್ವಶಿ ರೌಟೆಲಾ
ಪಂತ್‌ ಮತ್ತು ಊರ್ವಶಿ ರೌಟೆಲಾ   

ಮುಂಬೈ: ಉದಯೋನ್ಮುಖ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ರಿಷಬ್ ಪಂತ್ ಬ್ಯಾಟಿಂಗ್‌ ವೈಫಲ್ಯಕ್ಕೆ ಕೊನೆಗೂ ಕಾರಣ ಸಿಕ್ಕಿದೆ. ಅದುಬಾಲಿವುಡ್ ನಟಿ ಊರ್ವಶಿ ರೌಟೆಲಾ ಜೊತೆ ಡೇಟಿಂಗ್‌ ಮಾಡುತ್ತಿರುವುದೇ ಪಂತ್ ವೈಪಲ್ಯಕ್ಕೆ ಕಾರಣ ಎಂದು ಕೆಲವರುಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡುತ್ತಿದ್ದಾರೆ.

ದರ್ಶನ್‌ ಅಭಿನಯದ ಐರಾವತ ಸಿನಿಮಾದಲ್ಲಿಊರ್ವಶಿ ರೌಟೆಲಾ ನಾಯಕಿಯಾಗಿ ನಟಿಸಿದ್ದರು. ಇದೀಗ ಪಂತ್‌, ಊರ್ವಶಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಮುಂಬೈನಲ್ಲಿ ಇಬ್ಬರು ಇತ್ತೀಚೆಗೆ ಹೊಟೇಲ್‌ನಲ್ಲಿ ಡಿನ್ನರ್‌ ಮಾಡಿದ್ದರು ಎಂದು ಇಂಗ್ಲಿಷ್‌ ಸುದ್ದಿ ವಾಹಿನಿ ಟೈಮ್ಸ್‌ ನೌ ವರದಿ ಮಾಡಿತ್ತು.

ಮೈದಾನದಲ್ಲಿಬ್ಯಾಟಿಂಗ್‌ ಹಾಗೂ ವಿಕೆಟ್ ಕೀಪಿಂಗ್‌ ಮಾಡಲು ಪರದಾಡುತ್ತಿರುವ ಪಂತ್‌ ಅವರಿಗೆ ಅಭಿಮಾನಿಗಳು ಏಕಾಗ್ರತೆ ಹೆಚ್ಚಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪಂತ್ ಮಾತ್ರ ವೈದಾನದಲ್ಲಿ ಕಸರತ್ತು ಮಾಡುತ್ತಿದ್ದಾರೆ. ಏಕದಿನ ಪಂದ್ಯಗಳಲ್ಲಿ ಉತ್ತಮ ಫಾರ್ಮ್‌ಗೆ ಮರಳುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.

ADVERTISEMENT

ಈ ಹಿಂದೆನಟಿಊರ್ವಶಿ ರೌಟೆಲಾ ಹಾರ್ದಿಕ್‌ ಪಾಂಡ್ಯ ಜೊತೆ ಡೇಟಿಂಗ್‌ ಮಾಡುತ್ತಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಪಾಂಡ್ಯನತಶಾ ಸ್ಟಾಂಕೋವಿಕ್ ಜೊತೆ ಡೇಟಿಂಗ್‌ ಮಾಡುತ್ತಿರುವುದು ಬಹಿರಂಗವಾಗಿದೆ.ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಪಾಂಡ್ಯ ಚೇತರಿಸಕೊಳ್ಳುತ್ತಿದ್ದು ನ್ಯೂಜಿಲೆಂಡ್‌ ಸರಣಿಗೆ ಲಭ್ಯರಾಗುವ ಸಾಧ್ಯತೆಗಳಿವೆ.

2019ರ ಜನವರಿಯಲ್ಲಿ ಪಂತ್‌ ಇನ್‌ಸ್ಟಾದಲ್ಲಿ ಗೆಳತಿ ಇಶಾರೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದರು. ನಾನು ನಿನ್ನನ್ನು ಖುಷಿಪಡಿಸಲು ಬಯಸುತ್ತೇನೆ. ಏಕೆಂದರೆ ನನ್ನ ಸಂತೋಷಕ್ಕೆ ನೀನೇ ಕಾರಣ ಎಂದು ಬರೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.