ADVERTISEMENT

ದಳಪತಿ ವಿಜಯ್ ಅಭಿನಯದ ವಾರಿಸು ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಪಿಟಿಐ
Published 24 ಅಕ್ಟೋಬರ್ 2022, 9:36 IST
Last Updated 24 ಅಕ್ಟೋಬರ್ 2022, 9:36 IST
ವಾರಿಸು
ವಾರಿಸು    

ಚೆನ್ನೈ: ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ವಾರಿಸು’ ಸಿನಿಮಾ ಬಿಡುಗಡೆ ದಿನಾಂಕ ದೀಪಾವಳಿ ಹಬ್ಬದಂದು ಘೋಷಣೆಯಾಗಿದೆ.

ಹೌದು ವಾರಿಸು ಸಿನಿಮಾ ಬರುವ ಸಂಕ್ರಾಂತಿಗೆ (ಜನವರಿ 12, 2022) ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ತಿಳಿಸಿದೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ ಅಡಿ ದಿಲ್ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ತೆಲುಗಿನ ಬೃಂದಾವನಂ, ಮಹರ್ಷಿ ಖ್ಯಾತಿಯ ವಂಶಿ ಪೈಡಿಪಳ್ಳಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ADVERTISEMENT

ತಮಿಳು–ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿತ್ತಿರುವ ವಾರಿಸು ತೆಲುಗಿನಲ್ಲಿಯೂ ಕೂಡ ಸಂಕ್ರಾಂತಿ ದಿನವೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.

ಇನ್ನು ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ, ಪ್ರಕಾಶ್ ರಾಜ್, ಶರತ್ ಕುಮಾರ್, ಎಸ್‌.ಜೆ ಸೂರ್ಯ, ಯೋಗಿ ಬಾಬು ಸೇರಿದಂತೆ ಅನೇಕ ನಟ ನಟಿಯರು ಅಭಿನಯಿಸುತ್ತಿದ್ದಾರೆ.

ಸಂಕ್ರಾಂತಿ ದಿನವೇ ಪ್ರಬಾಸ್ ಅಭಿನಯದ ಆದಿಪುರುಷ್ ಸಿನಿಮಾ ಕೂಡ ಬಿಡುಗಡೆಯಾಗುತ್ತಿದ್ದು, ಎರಡೂ ಚಿತ್ರಗಳಿಗೆ ಘರ್ಷಣೆ ಏರ್ಪಡಲಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.