ADVERTISEMENT

ಶರ್ವಾನಂದ, ಸಮಂತಾ ಅಭಿನಯದ ಜಾನು ಚಿತ್ರದ ಟೀಸರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 6:33 IST
Last Updated 10 ಜನವರಿ 2020, 6:33 IST
   

ಹೈದರಾಬಾದ್‌: ಟಾಲಿವುಡ್‌ನ ಖ್ಯಾತ ನಟ ಶರ್ವಾನಂದ ಹಾಗೂಸಮಂತಾ ಅಭಿನಯದ‘ಜಾನು’ ಸಿನಿಮಾದ ಟೀಸರ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ತಮಿಳಿನ ವಿಜಯ್‌ ಸೇತುಪತಿ ಹಾಗೂ ತ್ರಿಷಾ ಅಭಿನಯದ ‘96’ ಸಿನಿಮಾ ಜಾನು ಆಗಿ ತೆಲುಗಿಗೆರಿಮೇಕ್‌ ಆಗುತ್ತಿದೆ. ಈ ಚಿತ್ರ ಈಗಾಗಲೇ ಕನ್ನಡದಲ್ಲಿ '99'ಆಗಿದೆ. ಇದರಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಭಾವನಾ ನಟಿಸಿದ್ದರು.

ಜಾನು ಚಿತ್ರದ ಟೀಸರ್‌ ಬಿಡುಗಡೆಯಾಗಿ 18 ಗಂಟೆಗಳಲ್ಲಿ 23 ಲಕ್ಷಕ್ಕೂ ಹೆಚ್ಚು ಜನರುವೀಕ್ಷಣೆ ಮಾಡಿದ್ದಾರೆ. ಈ ಹಿಂದೆ‘ಜಾನು’ ಚಿತ್ರದ ಪೋಸ್ಟರು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು.

ADVERTISEMENT

ಎರಡು ದಶಕಗಳ ಹಿಂದೆ ಯಾವ್ಯಾವುದೋ ಪರಿಸ್ಥಿತಿಯಿಂದ ಬೇರೆಯಾದ ಎರಡು ಪುಟ್ಟ ಹೃದಯಗಳು ಬದಲಾದ ಕಾಲಘಟ್ಟದಲ್ಲಿ ಮತ್ತೆ ಮುಖಾಮುಖಿಯಾಗಿ, ನೆನಪಿನ ಅಲೆ ಎಬ್ಬಿಸಿಕೊಂಡು ಸಾಗುವ ಕಥಾ ಹಂದರ ಇರುವ ಸಿನಿಮಾವಿದು.ಈ ಚಿತ್ರ ತಮಿಳಿನಲ್ಲಿ ಸೂಪರ್‌ ಹಿಟ್‌ ಆಗಿತ್ತು.

ಜಾನು ಚಿತ್ರವನ್ನು ಸಿ. ಪ್ರೇಮಕುಮಾರ್‌ ನಿರ್ದೇಶಿಸಲಿದ್ದಾರೆ. ಸಂಗೀತ ಸಂಯೋಜನೆ ಗೋವಿಂದ ವಸಂತನ್‌ ಅವರದು. ದಿಲ್‌ ರಾಜು ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.