ADVERTISEMENT

ಈಜುಕೊಳದಲ್ಲಿ ಪೂಲ್ ಬೇಬಿಯಾಗಿ ಕಾಣಿಸಿಕೊಂಡ ಜಾಕ್ವೆಲಿನ್ ಫರ್ನಾಂಡಿಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2021, 7:36 IST
Last Updated 12 ನವೆಂಬರ್ 2021, 7:36 IST
ನಟಿ ಜಾಕ್ವೆಲಿನ್ ಫರ್ನಾಂಡಿಸ್ ದುಬೈ ಪ್ರವಾಸ
ನಟಿ ಜಾಕ್ವೆಲಿನ್ ಫರ್ನಾಂಡಿಸ್ ದುಬೈ ಪ್ರವಾಸ   

ಬೆಂಗಳೂರು: ಕಪೂರ್ ಸಹೋದರಿಯರು ದುಬೈ ಪ್ರವಾಸ ಮತ್ತು ಹುಟ್ಟುಹಬ್ಬದ ಆಚರಣೆಯಲ್ಲಿ ತೊಡಗಿದ್ದು ಸುದ್ದಿಯಾದ ಬೆನ್ನಲ್ಲೇ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ದುಬೈ ಪ್ರವಾಸಕ್ಕೆ ತೆರಳಿದ್ದಾರೆ.

ಬಾಲಿವುಡ್ ಮಂದಿ ಪ್ರವಾಸ ಹೋದರೆ ಅಭಿಮಾನಿಗಳಿಗಾಗಿಯೇ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಜಾಕ್ವೆಲಿನ್ ಫರ್ನಾಂಡಿಸ್, ದುಬೈನಲ್ಲಿ ಈಜುಕೊಳದಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುತ್ತಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ನೀಲಿ ಬಣ್ಣದ ಸ್ವಿಮ್ ಸೂಟ್‌ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಪೋಸ್ಟ್ ಮಾಡಿರುವ ಫೋಟೊಗೆ, ‘ಪೂಲ್ ಬೇಬಿ’ ಎಂಬ ಅಡಿಬರಹವನ್ನು ಅವರು ನೀಡಿದ್ದಾರೆ.

ಜಾಕ್ವೆಲಿನ್ ಪೋಸ್ಟ್ ಅನ್ನು ಐದು ಲಕ್ಷಕ್ಕೂ ಅಧಿಕ ಮಂದಿ ಮೆಚ್ಚಿಕೊಂಡಿದ್ದು, ಕಾಮೆಂಟ್ ಮೂಲಕವೂ ನಟಿಯ ದುಬೈ ವಿಹಾರವನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.