ADVERTISEMENT

ಅಟ್ಯಾಕ್‌: ಜಾನ್‌ ಜೊತೆ ಜಾಕ್ವೆಲಿನ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 10:06 IST
Last Updated 26 ಜನವರಿ 2020, 10:06 IST
ಜಾಕ್ವೆಲಿನ್‌ ಫರ್ನಾಂಡಿಸ್
ಜಾಕ್ವೆಲಿನ್‌ ಫರ್ನಾಂಡಿಸ್   

ನಟ ಜಾನ್‌ ಅಬ್ರಹಾಂ ಹಾಗೂ ಜಾಕ್ವೆಲಿನ್‌ ಫರ್ನಾಂಡಿಸ್‌ ಮತ್ತೊಂದು ಬಾರಿ ಹೊಸ ಚಿತ್ರದಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ‘ಅಟ್ಯಾಕ್‌’ ಚಿತ್ರದಲ್ಲಿ ಜಾಕ್ವೆಲಿನ್‌ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಈ ಸಂಗತಿಯನ್ನು ಜಾಕ್ವೆಲಿನ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಘೋಷಣೆ ಮಾಡಿದ್ದು, ‘ಜಾನ್‌ ಅಬ್ರಹಾಂ ನಟನೆಯ ಮುಂದಿನ ಚಿತ್ರದಲ್ಲಿ ಅವರ ಜೊತೆ ನಟಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಜಾನ್‌ ಅಬ್ರಹಾಂ ಹಾಗೂ ಜಾಕ್ವೆಲಿನ್‌ ಫರ್ನಾಂಡಿಸ್ ‘ಡಿಶ್ಯೂಂ’, ‘ಹೌಸ್‌ಫುಲ್‌ 2’ ಹಾಗೂ ‘ರೇಸ್‌ 2’ ಸೇರಿ ಮೂರು ಚಿತ್ರಗಳಲ್ಲಿ ಜೊತೆಗೆ ನಟಿಸಿದ್ದರು. ಇದು ಈ ಜೋಡಿಯ ಒಟ್ಟಿಗೆ ನಟಿಸುತ್ತಿರುವ ನಾಲ್ಕನೇ ಚಿತ್ರ. ‘ಅಟ್ಯಾಕ್‌’ ಚಿತ್ರವು ಆಗಸ್ಟ್‌ 14ರಂದು ಬಿಡುಗಡೆಯಾಗಲಿದೆ.

ADVERTISEMENT

ಜಾನ್ ಅಬ್ರಹಾಂನಟನೆಯ ಚಿತ್ರವೊಂದುಸ್ವಾತಂತ್ರ್ಯದಿನಾಚರಣೆಸಂದರ್ಭಕ್ಕೆಬಿಡುಗಡೆಯಾಗುತ್ತಿರುವುದು ಇದು ಮೂರನೇ ಬಾರಿ. ‘ಸತ್ಯಮೇವ ಜಯತೇ’ ಹಾಗೂ ‘ಬಟ್ಲಾ ಹೌಸ್‌’ ಕ್ರಮವಾಗಿ 2018 ಹಾಗೂ 2019ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿತ್ತು.

ಆ್ಯಕ್ಷನ್‌ ಥ್ರಿಲ್ಲರ್‌ ‘ಅಟ್ಯಾಕ್‌’ ಚಿತ್ರದಲ್ಲಿ ರಕುಲ್‌ ಪ್ರೀತ್‌ ಸಿಂಗ್‌ ಕೂಡ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.