ಬೆಂಗಳೂರು: ಶ್ರೀಮುರುಳಿ ನಟನೆಯ ‘ಮದಗಜ’ ಹಾಗೂ ಮಾ.11ರಂದು ತೆರೆ ಮೇಲೆ ಬರಲು ಸಿದ್ಧವಾಗಿರುವ ದರ್ಶನ್ ನಟನೆಯ ರಾಬರ್ಟ್‌ನಲ್ಲಿ ಟಾಲಿವುಡ್‌ನ ಖ್ಯಾತ ನಟ ಜಗಪತಿಬಾಬು ಅವರು ಖಳನಾಯಕನಾಗಿ ನಟಿಸುತ್ತಿರುವುದು ಎಲ್ಲಿರಿಗೂ ತಿಳಿದಿರುವ ವಿಷಯ.
ಆದರೆ, ಚಿತ್ರದಲ್ಲಿ ಅವರ ಲುಕ್ ಹೇಗಿರುತ್ತದೆ ಎನ್ನುವುದನ್ನು ಎರಡೂ ಚಿತ್ರತಂಡಗಳು ಇಲ್ಲಿಯವರೆಗೂ ಗೌಪ್ಯವಾಗಿರಿಸಿತ್ತು. ಶುಕ್ರವಾರ, ಜಗಪತಿ ಬಾಬು ಅವರ ಜನ್ಮದಿನದಂದೇ ಚಿತ್ರತಂಡಗಳು ಅವರ ‘ಕ್ಯಾರೆಕ್ಟರ್ ಲುಕ್’ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡಿವೆ. ಎರಡೂ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ ಗೌಡ ಅವರು ನಿರ್ಮಾಪಕರಾಗಿದ್ದಾರೆ. ಎಸ್.ಮಹೇಶ್ ಕುಮಾರ್ ನಿರ್ದೇಶನದ ಮದಗಜದ 15 ಸೆಕೆಂಡ್ ಕ್ಯಾರೆಕ್ಟರ್ ಲುಕ್ ಟೀಸರ್‌ನಲ್ಲಿ ಜಗಪತಿ ಬಾಬು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಅವನ ಕಣ್ಣುಗಳು ಬಾಯಾರಿದಾಗ, ರಕ್ತಪಾತ ಕಡ್ಡಾಯವಾಗಿತ್ತು!!’ ಎಂದು ಉಲ್ಲೇಖಿಸಿ ಟ್ವೀಟ್ ಮೂಲಕ ಮಹೇಶ್ ಕುಮಾರ್ ಟ್ವಿಟರ್‌ನಲ್ಲಿ ಪೋಸ್ಟರ್ ಕೂಡಾ ರಿಲೀಸ್ ಮಾಡಿದ್ದಾರೆ. ಚಿತ್ರತಂಡವು ಅವರಿಗೆ ಟೀಸರ್ ಮೂಲಕವೇ ಜನ್ಮದಿನದ ಶುಭಾಶಯ ಕೋರಿದೆ. ಈ ಚಿತ್ರವು ತಮಿಳು, ತೆಲುಗು ಭಾಷೆಯಲ್ಲೂ ತೆರೆ ಮೇಲೆ ಬರಲಿದೆ.
ಇನ್ನು, ರಾಬರ್ಟ್ ಚಿತ್ರದಲ್ಲಿ ಜಗಪತಿ ಬಾಬು ಅವರು ಹೇಗಿರುತ್ತಾರೆ ಎನ್ನುವುದನ್ನು ಟ್ವಿಟರ್‌ನಲ್ಲಿ ಪೋಸ್ಟರ್ ಅಪ್‌ಲೋಡ್ ಮಾಡುವ ಮುಖಾಂತರನಟ ದರ್ಶನ್ ಸಿನಿಪ್ರಿಯರಿಗೆ ಖಳನಾಯಕನನ್ನು ಪರಿಚಯಿಸಿದ್ದಾರೆ. ‘ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ಸರ್ ಅವರಿಗೆ ಜನ್ಮದಿನದ ಶುಭಾಶಯಗಳು. ರಾಬರ್ಟ್‌ಗಾಗಿ ಅವರೊಂದಿಗೆ ಕೆಲಸ ಮಾಡಿದ್ದು ಸಂತೋಷವಾಗಿದೆ’ ಎಂದೂ ದರ್ಶನ್ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.