ADVERTISEMENT

28ವರ್ಷಗಳಿಂದ ಜತೆಗಿದ್ದ ಕಾರು ಚಾಲಕ ನಿಧನ: ಭಾವುಕ ಪೋಸ್ಟ್‌ ಹಂಚಿಕೊಂಡ ನಟ ಜಗ್ಗೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2026, 11:07 IST
Last Updated 29 ಜನವರಿ 2026, 11:07 IST
<div class="paragraphs"><p>ಜಗ್ಗೇಶ್ ಅವರ ಕಾರು ಚಾಲಕ ಪದ್ಮನಾಭ</p></div>

ಜಗ್ಗೇಶ್ ಅವರ ಕಾರು ಚಾಲಕ ಪದ್ಮನಾಭ

   

ಕನ್ನಡದ ಹಾಸ್ಯ ನಟ ‘ಜಗ್ಗೇಶ್’ ಅವರ ಕಾರನ್ನು 28 ವರ್ಷಗಳಿಂದ ಚಾಲನೆ ಮಾಡುತ್ತಿದ್ದ ಪದ್ಮನಾಭ ಅವರು ನಿಧನರಾಗಿದ್ದಾರೆ. ಸ್ವತಃ ಜಗ್ಗೇಶ್ ಅವರೇ ಖುದ್ದಾಗಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಜಗ್ಗೇಶ್‌ ಅವರ ಕಾರಿನ ಚಾಲಕನಾಗಿ ಕೆಲಸ ನಿರ್ವಹಿಸಿದ್ದ 54 ವರ್ಷದ ಪದ್ಮನಾಭ ಅವರು ಹೃದಯ ಸ್ತಂಭನದಿಂದ ‌ಮೃತಪಟ್ಟಿದ್ದಾರೆ. ಪದ್ಮನಾಭ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಜಗ್ಗೇಶ್ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

‘ಶ್ರೀ ಕೃಷ್ಣ ಒಂದು ಮಾತು ಹೇಳುತ್ತಾನೆ. ಒಂದು ದಿನ ಇದ್ದದ್ದು ಮತ್ತೊಂದು ದಿನ ಇಲ್ಲವಾಗುತ್ತೆ. ನಶ್ವರ ಈ ಜಗತ್ತು’ ಎಂದು ಬರೆದಿರುವ ಜಗ್ಗೇಶ್‌ ‘ನನ್ನ ಕಾರಿನ ಚಾಲಕ ಪದ್ದ (ಪದ್ಮನಾಭ) 28 ವರ್ಷ ನನ್ನ ಚಾಲಕನಾಗಿ ಕಾರ್ಯ ನಿರ್ವಹಿಸಿದ್ದ. ನಮ್ಮ ಮನೆಯಲ್ಲಿ ಹೆಂಡತಿ, ಮಕ್ಕಳು, ಮೊಮ್ಮಗನಿಗೆ ಹಾಗೂ ನಮ್ಮ ಮನೆಯ ಸದಸ್ಯರಾದ ಶ್ವಾನ (ಅರ್ಜುನ, ಪಿಂಟು, ಸೂರಜ್, ಸೂರ್ಯ) ಇವರಿಗೂ  ಆತ್ಮೀಯನಾಗಿದ್ದನು’ ಎಂದು ಬರೆದಿದ್ದಾರೆ.

‘ನನಗಿಂತ ಹೆಚ್ಚು ಮೊಬೈಲ್ ಕರೆ ಇವನಿಗೆ ಬರುತ್ತಿತ್ತು. ಸಿನಿಮಾ ಹಾಗೂ ರಾಜಕೀಯದ ನನ್ನ ಸ್ನೇಹಿತರು ಇವನಿಗೆ ಕರೆಮಾಡಿ ನನಗೆ ವಿಷಯ ಮುಟ್ಟಿಸುತ್ತಿದ್ದರು, ಕಾರಣ ನಾನು ಮೊಬೈಲ್ ಬಳಸುವುದಿಲ್ಲ. ಆ ಕಾರಣ ನನ್ನ ಬಲ್ಲ ಎಲ್ಲರಿಗೂ ತಿಳಿದಿದೆ. ಕೇವಲ 54 ವರ್ಷ ವಯಸ್ಸಿಗೆ ಹೃದಯ ಸ್ತಂಭನವಾಗಿ ಕೊನೆ ಉಸಿರು ನಿಲ್ಲಿಸಿದ. ಅವನ ಮೇಲಿನ ಪ್ರೀತಿ ಹಾಗೂ ಸೇವೆಯ ಋಣಕ್ಕೆ ಅವನ ಕೊನೆಯ ಕ್ಷಣದವರೆಗೂ ಜೊತೆಗಿದ್ದು ವಿದಾಯ ಹೇಳಿಬಂದೆ. ಮನಸ್ಸಿಗೆ ತುಂಬಾ ದುಃಖವಾಯಿತು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಪದ್ದ. ಹೋಗಿ ಬಾ’ ಎಂದು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.