ADVERTISEMENT

‘ಮೇಕಪ್‌’ ಮಾಡಿ ₹35 ಕೋಟಿ ಮೌಲ್ಯದ ಆಸ್ತಿ ಕಳೆದುಕೊಂಡಿದ್ದ ಜಗ್ಗೇಶ್‌! 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮೇ 2020, 11:20 IST
Last Updated 31 ಮೇ 2020, 11:20 IST
ನಟ ಜಗ್ಗೇಶ್‌
ನಟ ಜಗ್ಗೇಶ್‌    

ಬೆಂಗಳೂರು: ತಮ್ಮದೇ ಅಭಿನಯದ, ಪತ್ನಿ ಪರಿಮಳಾನಿರ್ಮಾಣದ ‘ಮೇಕಪ್‌’ ಚಿತ್ರದಿಂದ ತಮಗಾದ ನಷ್ಟವನ್ನು ಜಗ್ಗೇಶ್‌ ಇಂದು ಬಹಿರಂಗಗೊಳಿಸಿದ್ದಾರೆ.

ಗಳಿಕೆಯ ದೃಷ್ಟಿಯಿಂದ ಸೋತ ‘ಮೇಕಪ್‌’ ಚಿತ್ರದ ನಿರ್ಮಾಣಕ್ಕೆ ಮಾಡಲಾದ ಸಾಲ ತೀರಿಸಲು ಹೋಗಿ ತಾವು ಕಳೆದುಕೊಂಡ ಆಸ್ತಿ ಮತ್ತು ಅದರ ಮೌಲ್ಯದ ಬಗ್ಗೆ ಜಗ್ಗೇಶ್‌ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

‘ಕನ್ನಡ ಮೂವೀಸ್‌ ಫೋರಮ್‌’ ಎಂಬ ಟ್ವಿಟರ್‌ ಹ್ಯಾಂಡಲ್‌ ಇಂದು ‘ಮೇಕಪ್‌ ಚಿತ್ರ’ ಪೋಸ್ಟರ್‌ಗಳನ್ನು ಹಂಚಿಕೊಂಡಿತ್ತು. ಇದನ್ನು ಬೇಸರದೊಂದಿಗೆ ರೀಟ್ವೀಟ್‌ ಮಾಡಿರುವ ಜಗ್ಗೇಶ್‌,‘ಕನ್ನಡಿಗರಿಗೆ ವಿಭಿನ್ನ ಚಿತ್ರ ನೀಡಬೇಕು ಹಾಗೂ ಹೊರ ರಾಜ್ಯಕ್ಕೆ ನನ್ನ ಪ್ರತಿಭೆ ನಿರೂಪಿಸಬೇಕು ಎಂದು ನನ್ನ ಸ್ವಂತ ಬಂಡವಾಳ ಹಾಕಿ ಬಹಳ ನಂಬಿಕೆಯಿಂದ ಮಾಡಿದ ಚಿತ್ರ ‘ಮೇಕಪ್‌’. ದೌರ್ಭಾಗ್ಯ, ಚಿತ್ರದಿಂದ2002ರಲ್ಲೆ ₹75 ಲಕ್ಷ ಕಳೆದುಕೊಂಡೆ! ಆ ಸಾಲ ತೀರಿಸಲು ಅಂದು ನಾನು ಮಾರಿದ ಮನೆ ಇಂದು ₹35 ಕೋಟಿ ಬೆಲೆ ಬಾಳುವ ಆಸ್ತಿಯಾಗಿದೆ. ಅದನ್ನು ಕೊಂಡುಕೊಂಡ ನನ್ನ ಮಿತ್ರನಿಗೆ ಇಂದು ₹16 ಲಕ್ಷ ಬಾಡಿಗೆ ಬರುತ್ತಿದೆ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಜಗ್ಗೇಶ್‌ ಚಿತ್ರ’ ಬ್ಯಾನರ್‌ನಡಿ ಮೂಡಿ ಬಂದಿದ್ದ ಈ ಚಿತ್ರವನ್ನು ಜಗ್ಗೇಶ್‌ ಪತ್ನಿ ಪರಿಮಳಾ ನಿರ್ಮಾಣ ಮಾಡಿದ್ದರು. ಸಂಗೀತಂ ಶ್ರೀನಿವಾಸ ರಾವ್‌ ಅವರು ಚಿತ್ರ ನಿರ್ದೇಶನ ಮಾಡಿದ್ದರು. ನಟಿ ಲೈಲಾ ಪಟೇಲ್‌ ಅವರು ಜಗ್ಗೇಶ್‌ ಅವರೊಂದಿಗೆ ನಾಯಕ ನಟಿಯಾಗಿ ನಟಿಸಿದ್ದರು. ಜಗ್ಗೇಶ್‌ ಸೋದರ ಕೋಮಲ್‌ ಅವರೂ ಪೋಷಕ ಪಾತ್ರ ನಿಭಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.