ADVERTISEMENT

Photos: ತಂಗಿ ಖುಷಿ ಕಪೂರ್ ಜನ್ಮದಿನದ ಸಂಭ್ರಮದಲ್ಲಿ ಜಾಹ್ನವಿ ಕಪೂರ್ ಮಿಂಚು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2021, 5:43 IST
Last Updated 7 ನವೆಂಬರ್ 2021, 5:43 IST
ಜಾಹ್ನವಿ ಕಪೂರ್, ಚಿತ್ರ–ಇನ್‌ಸ್ಟಾಗ್ರಾಂ
ಜಾಹ್ನವಿ ಕಪೂರ್, ಚಿತ್ರ–ಇನ್‌ಸ್ಟಾಗ್ರಾಂ   

ಬೆಂಗಳೂರು: ದಿವಂಗತ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಮಗಳು ಖುಷಿ ಕಪೂರ್ ಕಳೆದ ಶುಕ್ರವಾರವಷ್ಟೇ ತಮ್ಮ 22 ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರು.

ಆದರೆ, ತಂಗಿಯ ಜನ್ಮದಿನವಿದ್ದರೂ ಸಾಕಷ್ಟು ಗಮನ ಸೆಳೆದಿದ್ದುಖುಷಿ ಅಕ್ಕ ಹಾಗೂ ಚಿತ್ರರಂಗದಲ್ಲಿ ಮಿಂಚುತ್ತಿರುವ ದಢಕ್ ಚೆಲುವೆ ಜಾಹ್ನವಿ ಕಪೂರ್.

ಖುಷಿ ಬರ್ತಡೇ ಅಂಗವಾಗಿ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಜಾಹ್ನವಿ ಕಪೂರ್ ಆಕರ್ಷಕ ಉಡುಗೆಯಲ್ಲಿ ಕಂಡು ಬಂದಿದ್ದು ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ADVERTISEMENT

ಗುಲಾಬಿ ಉಡುಗೆಯಲ್ಲಿ ಜಾಹ್ನವಿ ತನ್ನ ತಂಗಿಯ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡು, ಶುಭಾಶಯ ಕೋರಿದ್ದಾರೆ. ಈ ವೇಳೆ ಜಾಹ್ನವಿಯ ಪೋಟೊಗಳು ವೈರಲ್ ಆಗಿವೆ. ನೆಟ್ಟಿಗರು, ಓಹ್! ಬಾರ್ಬಿ ಡಾಲ್ ಎಂದು ಉದ್ಘಾರ ತೆಗೆದಿದ್ದಾರೆ.

ದಢಕ್ ಹಾಗೂ ಗುಂಜೆನ ಸಕ್ಸೆನಾ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಸದ್ದು ಮಾಡಿರುವ ಜಾಹ್ನವಿ ದೋಸ್ತಾನಾ2, ಗುಡ್‌ ಲಕ್ ಜರ್ರೀ ಹಾಗೂ ಮಿ ಎಂಬ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿಗುಡ್‌ ಲಕ್ ಜರ್ರೀ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಗೆ ಸಿದ್ದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.