ADVERTISEMENT

ಸಾವಿರ ಕೋಟಿ ಗಳಿಕೆ ಕಂಡ ಜವಾನ್ ಚಿತ್ರ! ಬಾಲಿವುಡ್‌ನಲ್ಲಿ ಹೊಸ ಭರವಸೆ

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಈ ಮಾಹಿತಿ ಹಂಚಿಕೊಂಡಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2023, 10:29 IST
Last Updated 26 ಸೆಪ್ಟೆಂಬರ್ 2023, 10:29 IST
<div class="paragraphs"><p>ಜವಾನ್ ಪೋಸ್ಟ್‌ರ್</p></div>

ಜವಾನ್ ಪೋಸ್ಟ್‌ರ್

   

ಮುಂಬೈ: ಆಟ್ಲಿ ನಿರ್ದೇಶನದ, ನಟ ಶಾರುಕ್ ಖಾನ್ ಮುಖ್ಯ ಪಾತ್ರದಲ್ಲಿರುವ ಜವಾನ್ ಚಿತ್ರ ಸೆ.7 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಿನಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇದೀಗ ಈ ಚಿತ್ರ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ₹ 1,000 ಕೋಟಿ ಕ್ಲಬ್‌ಗೆ ಸೇರಿದೆ.

ADVERTISEMENT

ಹೌದು ಜವಾನ್ ಸಿನಿಮಾ ಸಾವಿರ ಕೋಟಿ ರೂಪಾಯಿ ಗಳಿಸಿದ ಮತ್ತೊಂದು ಬಾಲಿವುಡ್ ಚಿತ್ರವಾಗಿದೆ. ಇತ್ತೀಚಿಗೆ ಪಠಾಣ್ ಚಿತ್ರ ಕೂಡ ಸಾವಿರ ಕೋಟಿ ಗಳಿಕೆ ದಾಟಿತ್ತು.

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಈ ಮಾಹಿತಿ ಹಂಚಿಕೊಂಡಿದ್ದು 20 ದಿನದಲ್ಲಿ ಜವಾನ್ ಚಿತ್ರ ₹1,004.2 ಕೋಟಿ ಜಾಗತಿಕವಾಗಿ ಬಾಕ್ಸ್‌ ಆಫೀಸ್ ಗಳಿಕೆ ಕಂಡಿದೆ. ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದೆ. ಈ ಚಿತ್ರದ ಒಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಈ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಶಾರುಖ್ ಚಿತ್ರ ಹೊಸ ದಾಖಲೆ ಬರೆದಿದೆ. ಕೆಲವೇ ದಿನಗಳಲ್ಲಿ ಸಾವಿರ ಕೋಟಿ ಕ್ಲಬ್‌ಗೆ ಸೇರಿದ ಚಿತ್ರವಾಗಿದೆ.

ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಜವಾನ್ ಚಿತ್ರದ ವಿಶ್ವದಾದ್ಯಂತ ಮೊದಲ ದಿನದ ಅತ್ಯಧಿಕ ಗಳಿಕೆ ಕಂಡಿತ್ತು. ಗಳಿಕೆ ದೃಷ್ಟಿಯಿಂದ ಇತ್ತೀಚೆಗೆ ಬಾಲಿವುಡ್ ಚಿತ್ರಗಳು ಮಕಾಡೆ ಮಲಗುತ್ತಿರುವಾಗ ಜವಾನ್ ಚಿತ್ರ ಬಾಲಿವುಡ್‌ನಲ್ಲಿ ಹೊಸ ಆಶಾವಾದ ಹುಟ್ಟಿಸಿದೆ.

ಜವಾನ್ ಚಿತ್ರದಲ್ಲಿ ವಿಜಯ್ ಸೇತುಪತಿ, ಸಂಜಯ್ ದತ್, ನಯನತಾರಾ, ದೀಪಿಕಾ ಪಡುಕೋಣೆ ವಿಶೇಷ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾಹ್ ಖುರೇಷಿ, ರಿಧಿ ದೊಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ತಾರಾಗಣವಿದೆ.

ಸೆಪ್ಟೆಂಬರ್ 7ರಂದು ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.