ಚೆನ್ನೈ: ತಮಿಳು ನಟ ಜೀವಾ 37ನೇ ವರ್ಷದ ಜನ್ಮದಿನಸಂಭ್ರಮದಲ್ಲಿದ್ದು ಅವರ ’ವರಲಾರು ಮುಕ್ಕಿಯಾಂ’ ಸಿನಿಮಾ ಘೋಷಣೆಯಾಗಿದೆ.
ಜೀವಾ ಅವರಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.
ಜೀವಾ ಅವರ ತಂದೆ ಚೌದರಿ ಒಡೆತನದ ಸೂಪರ್ ಗುಡ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಹಲವು ಹಿಟ್ ಚಿತ್ರಗಳನ್ನು ನೀಡಿರುವ ಜೀವಾ ಅವರ ಈ ಹೊಸ ಚಿತ್ರಕ್ಕೆ ಸಂತೋಷ್ ರಾಜನ್ ನಿರ್ದೇಶನ ಮಾಡಲಿದ್ದಾರೆ.
ಕಳೆದ ವರ್ಷದಲ್ಲಿ ಅವರು ನಟಿಸಿದ್ದ ಜೀವಾ ಹಾಗೂ 83 ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇದೇ ವರ್ಷದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ ಎಂದು ನಿರ್ದೇಶಕ ಸಂತೋಷ್ ರಾಜನ್ ಹೇಳಿದ್ದಾರೆ.
ಸಂಕ್ರಾಂತಿ ಬಳಿಕ ಈ ಸಿನಿಮಾದ ಶೂಟಿಂಗ್ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.