ADVERTISEMENT

ಕಾಜಲ್‌ ಅಗರವಾಲ್‌ಗೆ ಭೀಕರ ಅಪಘಾತ? ನಟಿ ನೀಡಿದ ಸ್ಪಷ್ಟನೆ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2025, 6:33 IST
Last Updated 9 ಸೆಪ್ಟೆಂಬರ್ 2025, 6:33 IST
<div class="paragraphs"><p>ಕಾಜಲ್‌ ಅಗರವಾಲ್‌</p></div>

ಕಾಜಲ್‌ ಅಗರವಾಲ್‌

   

ಚೆನ್ನೈ: ನಟಿ ಕಾಜಲ್‌ ಅಗರವಾಲ್‌ ಅವರು ಭೀಕರ ಅಪಘಾತಕ್ಕೆ ಒಳಗಾಗಿದ್ದಾರೆ, ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲ ಹರಿದಾಡುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟಿ, ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. 

ADVERTISEMENT

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ನಾನು ಅಪಘಾತಕ್ಕೀಡಾಗಿದ್ದೇನೆ ಎನ್ನುವ ಕೆಲವು ಆಧಾರರಹಿತ ಸುದ್ದಿಗಳು ನನಗೆ ಬಂದಿವೆ (ಮೃತಪಟ್ಟಿದ್ದಾರೆ ಎಂದೂ ಹೇಳಲಾಗಿದೆ!). ನಿಜ ಹೇಳಬೇಕೆಂದರೆ, ಇದು ತುಂಬಾ ತಮಾಷೆಯಾಗಿರುವ ಸುದ್ದಿಯಾಗಿದೆ, ಏಕೆಂದರೆ ಅದು ಸುಳ್ಳು. ದೇವರ ದಯೆಯಿಂದ, ನಾನು ಕ್ಷೇಮವಾಗಿದ್ದೇನೆ. ಅಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಅಥವಾ ಹರಡಬೇಡಿ ಎಂದು ಕೇಳಿಕೊಳ್ಳುತ್ತೇನೆ. ಸಕಾರಾತ್ಮಕ ಚಿಂತನೆ ಮತ್ತು ಸತ್ಯದ ಮೇಲೆ ಗಮನಹರಿಸೋಣ’ ಎಂದು ಬರೆದುಕೊಂಡಿದ್ದಾರೆ.

ಹರಿದಾಡಿದ ಸುಳ್ಳು ಸುದ್ದಿ

ನಟಿ ಕಾಜಲ್‌ ಅವರಿಗೆ ಭೀಕರ ಅಪಘಾತವಾಗಿದೆ. ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತು ಅನೇಕರು ಸಂತಾಪವನ್ನೂ ವ್ಯಕ್ತಪಡಿಸಿದ್ದರು. ಈ ವಿಚಾರ ತಿಳಿದ ನಟಿ ಸ್ಪಷ್ಟನೆ ನೀಡಿ ಆರೋಗ್ಯವಾಗಿದ್ದೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.