ADVERTISEMENT

ಇಂಡಿಯನ್‌ 2 ಖಳಪಾತ್ರದಲ್ಲಿ ಕಾಜಲ್‌?

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 9:31 IST
Last Updated 26 ಜನವರಿ 2020, 9:31 IST
ನಟಿ ಕಾಜಲ್‌ ಅಗರ್‌ವಾಲ್‌
ನಟಿ ಕಾಜಲ್‌ ಅಗರ್‌ವಾಲ್‌   

ಭಾರಿ ಸದ್ದು ಮಾಡುತ್ತಿರುವ, ಕಮಲಹಾಸನ್‌ ನಟನೆಯ ‘ಇಂಡಿಯನ್‌ 2’ ಸಿನಿಮಾದಲ್ಲಿ ನಟಿ ಕಾಜಲ್‌ ಅಗರ್‌ವಾಲ್‌ ನೆಗೆಟಿವ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿವೆ.

ಈ ಸಿನಿಮಾದಲ್ಲಿ ಕಾಜಲ್‌ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಈ ಹಿಂದಿನ ಯಾವ ಸಿನಿಮಾಗಳಲ್ಲೂ ಅವರು ಅಂತಹ ಪಾತ್ರ ನಿರ್ವಹಿಸಿರಲಿಲ್ಲ. ಚಿತ್ರದಲ್ಲಿ ಹಿರಿಯ ಮಹಿಳೆಯ ಪಾತ್ರದಲ್ಲಿ ಅವರು ನಟಿಸುತ್ತಿದ್ದು, ಕಮಲಹಾಸನ್‌ ಪತ್ನಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಆದರೆ ಯಾವ ರೀತಿಯ ಪಾತ್ರ ಎಂದು ಎಲ್ಲೂ ಹೇಳಿಕೊಂಡಿಲ್ಲ.

ಈಗ ಈ ಚಿತ್ರದಲ್ಲಿ ಕಾಜಲ್‌ ನಿರ್ವಹಿಸುತ್ತಿರುವ ಪಾತ್ರವು ನೆಗೆಟಿವ್‌ ಶೇಡ್‌ ಹೊಂದಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಚಿತ್ರದ ಕುತೂಹಲ ಹೆಚ್ಚಿಸಿದೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಪಾತ್ರದ ಬಗ್ಗೆ ಮಾತನಾಡಿದ ಕಾಜಲ್‌, ‘ಈ ಪಾತ್ರ ಮಾಡಲು ನಾನು ತುಂಬ ಉತ್ಸುಕಳಾಗಿದ್ದೇನೆ’ ಎಂದಷ್ಟೇ ಹೇಳಿ ಪಾತ್ರದ ಬಗ್ಗೆ ಯಾವ ಸುಳಿವು ಬಿಟ್ಟುಕೊಟ್ಟಿಲ್ಲ. ಒತ್ತಾಯಿಸಿದಾಗ ‘ಒಂದು ವೇಳೆ ನಾನು ಹೇಳಿದರೆ ಸಿನಿಮಾ ನಿರ್ದೇಶಕರು ನನ್ನನ್ನು ಸಾಯಿಸುತ್ತಾರಷ್ಟೇ’ ಎಂದು ತಮಾಷೆ ಮಾಡಿದ್ದಾರೆ.

ADVERTISEMENT

ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಕಾಜಲ್‌ ಅಭಿನಯದ ಭಾಗವು ಫೆಬ್ರುವರಿ ತಿಂಗಳಲ್ಲಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ರಕುಲ್‌ ಪ್ರೀತ್‌ ಸಿಂಗ್‌ ಹಾಗೂ ಸಿದ್ದಾರ್ಥ್‌ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾ ನಿರ್ದೇಶನ ಮಾಡುತ್ತಿರುವವರು ಶಂಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.