ADVERTISEMENT

ನಟಿ ಕಾಜಲ್‌ ಅಗರ್‌ವಾಲ್‌‌ ಮದುವೆ ಮೆಹಂದಿ ಶುರು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 11:31 IST
Last Updated 29 ಅಕ್ಟೋಬರ್ 2020, 11:31 IST
ಮದರಂಗಿ ಹಚ್ಚಿದ ಕೈಗಳನ್ನು ಪ್ರದರ್ಶಿಸಿದ ಕಾಜಲ್‌ ಅಗರ್‌ವಾಲ್‌ (ಟ್ವಿಟರ್‌ ಚಿತ್ರ)
ಮದರಂಗಿ ಹಚ್ಚಿದ ಕೈಗಳನ್ನು ಪ್ರದರ್ಶಿಸಿದ ಕಾಜಲ್‌ ಅಗರ್‌ವಾಲ್‌ (ಟ್ವಿಟರ್‌ ಚಿತ್ರ)   

ನಟಿ ಕಾಜಲ್‌ ಅಗರ್‌ವಾಲ್‌ ಅವರ ವಿವಾಹ ಸಂಬಂಧಿಸಿದ ಸಂಪ್ರದಾಯಗಳು ಈಗಾಗಲೇ ಆರಂಭಗೊಂಡಿವೆ.

ಅವರಅರಶಿನ - ಮದರಂಗಿ ಶಾಸ್ತ್ರ ಗುರುವಾರ ನೆರವೇರಿದೆ. ಕೊರೋನಾ ಕಾರಣಕ್ಕಾಗಿ ಅವರ ಆಪ್ತರು ಮತ್ತು ಕುಟುಂಬದ ಸದಸ್ಯರು ಮಾತ್ರ ಸಮಾರಂಭದಲ್ಲಿ ಹಾಜರಿದ್ದರು.

ಕೈಗೆ ಮದರಂಗಿ ಹಾಕಿಕೊಂಡ ಚಿತ್ರವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಾಜಲ್‌ ಅವರ ಮದುವೆ ಅ. ೩೦ರಂದು ಉದ್ಯಮಿ ಗೌತಮ್‌ ಕಿಚ್ಲು ಅವರೊಂದಿಗೆ ನಡೆಯಲಿದೆ.

ADVERTISEMENT

ಕಾಜಲ್‌ ಅವರು ಕಮಲ್‌ಹಸನ್‌ ಅವರ ‘ಇಂಡಿಯನ್‌’ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರವನ್ನು ಶಂಕರ್‌ ನಿರ್ದೇಶಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.