ಕಮಲ್ ಹಾಸನ್
ಬೆಂಗಳೂರು: ಬಹುಭಾಷಾ ನಟಿ ಬಿ. ಸರೋಜಾದೇವಿ (87) ಅವರು ಸೋಮವಾರ ನಿಧನರಾಗಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಮುಖಂಡರು, ನಟ ರಜನಿಕಾಂತ್, ಸುದೀಪ್, ಖುಷ್ಬು ಸುಂದರ್ ಸೇರಿದಂತೆ ಚಿತ್ರರಂಗದ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.
ತಮಿಳು ನಟ ಕಮಲ್ ಹಾಸನ್ ಕೂಡ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸರೋಜಾದೇವಿ ಬಗ್ಗೆ ಬರೆದುಕೊಂಡಿದ್ದಾರೆ.
‘ಸರೋಜಾ ದೇವಿ ಅಮ್ಮ ನನ್ನನ್ನು ಎಲ್ಲಿ ನೋಡಿದರೂ, ಯಾವುದೇ ವಯಸ್ಸಿನಲ್ಲಿಯೂ, ನನ್ನ ಕೆನ್ನೆಯನ್ನು ಚಿವುಟಿ, 'ಪ್ರಿಯ ಮಗನೇ' ಎಂದು ಕರೆಯುತ್ತಿದ್ದ ಮತ್ತೊಬ್ಬ ತಾಯಿ' ಎಂದು ಸ್ಮರಿಸಿಕೊಂಡಿದ್ದಾರೆ
ಭಾಷೆ ಅಥವಾ ಪ್ರಾದೇಶಿಕ ಗಡಿಗಳಿಲ್ಲದೆ ಬದುಕಿದ ಕಲಾವಿದೆ. ಅವರು ಇಂದು ನಿಧನರಾಗಿದ್ದಾರೆ. ನನ್ನ ಎರಡನೇ ಚಿತ್ರ 'ಪಾರ್ಥಲ್ ಪಸಿ ತಿರುಮ್' ಚಿತ್ರೀಕರಣದ ಸಮಯದಿಂದ ಆರಂಭಿಸಿ, ನನ್ನ ಮನದಲ್ಲಿ ಮರೆಯಲಾಗದ ಹಲವು ನೆನಪುಗಳು ತುಂಬಿ ತುಳುಕುತ್ತಿವೆ. ನನ್ನ ಕಣ್ಣುಗಳು ತೇವವಾಗಿವೆ. ನನ್ನನ್ನು ಮೊದಲಿಗನನ್ನಾಗಿ ನೋಡಲು ಯಾವಾಗಲೂ ಬಯಸುತ್ತಿದ್ದ ನನ್ನ ತಾಯಿಗೆ ನಮಸ್ಕರಿಸುತ್ತೇನೆ ಎಂದು ಕಮಲ್ ಹಾಸನ್ ಅವರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.