
ವಿಪ್ರ
ಚಿತ್ರ: ಇನ್‌ಸ್ಟಾಗ್ರಾಂ
ಈ ಮೇಲೆ ಫೋಟೊದಲ್ಲಿ ಕಾಣಿಸುತ್ತಿರುವ ಮುದ್ದಾದ ಮಗು ಚಂದನವನದ ಜನಪ್ರಿಯ ದಂಪತಿಯ ಪುತ್ರನಾಗಿದ್ದಾನೆ. ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಮುದ್ದಾದ ಮಗ.
ವಿಪ್ರ
ಸದ್ಯ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರ ಮುದ್ದಿನ ಮಗ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ 2023ರ ಜ. 26ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ವಿಪ್ರ
ವಿಶೇಷ ಏನೆಂದರೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಮದುವೆ ಆದ ದಿನಾಂಕದಂದೇ ಗಂಡು ಮಗು ಜನಿಸಿತ್ತು. ಅಂದರೆ 2025ರ ಜನವರಿ 26ರಂದು ಪುತ್ರನ ಆಗಮನವಾಗಿತ್ತು. ಈ ಬಗ್ಗೆ ಖುದ್ದು ವಸಿಷ್ಠ ಸಿಂಹ ಅವರು ಪೋಸ್ಟ್ ಹಂಚಿಕೊಂಡಿದ್ದರು.
ಬಳಿಕ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಕಳೆದ ವರ್ಷ ಕೃಷ್ಣ ಜನ್ಮಾಷ್ಟಮಿಯಂದೇ ಮಗನಿಗೆ ವಿಪ್ರ (VIPRAH) ಎಂದು ನಾಮಕರಣ ಮಾಡಿದ್ದರು. ಜೊತೆಗೆ ವಿಪ್ರ ಹೆಸರಿನ ಅರ್ಥ, VI ಅಂದರೆ ವಿಷ್ಣು, PRAH ಪರಮಾರತ್ಮ, ಶಿವ ಅಂತ ಅರ್ಥ. ದೇವರ ಆಶೀರ್ವಾದ ಇವನ ಮೇಲೆ ಇರುತ್ತದೆ. ಹೀಗಾಗಿ ನಮ್ಮ ಮಗನಿಗೆ ವಿಪ್ರ ಎಂದು ನಾಮಕರಣ ಮಾಡಿದ್ದೆವು ಎಂದು ಹೇಳಿಕೊಂಡಿದ್ದರು. ಮನೆಯಲ್ಲಿ ವಿಪ್ರನನ್ನು (VIP) ವಿಐಪಿ ಅಂತಲೇ ಕರೆಯುತ್ತೇವೆ ಎಂದಿದ್ದರು.
ಸದ್ಯ ಮಗನ ಹುಟ್ಟುಹಬ್ಬದ ಪ್ರಯುಕ್ತ ನಟಿ ಹರಿಪ್ರಿಯ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಮಗನ ಫೋಟೊವನ್ನು ಹಾಕಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ ಹುಟ್ಟುಹಬ್ಬದ ಶುಭಾಶಯಗಳು ಕಂದ. ಖುಷಿಯಾಗಿ ಬಾಳು, ಏಲ್ಲರಿಗೂ ಖುಷಿ ಹಂಚುವವನಾಗಿ ಬಾಳು’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.