ರಾಜ್ ಬಿ ಶೆಟ್ಟಿ ಮೊದಲಿನಿಂದಲೂ ತಮ್ಮ ವಿಭಿನ್ನ ಅಭಿನಯದ ಮೂಲಕ ಜನರ ಮನ್ನಸ್ಸನ್ನು ಗೆದ್ದಿರುವಂತಹ ನಟ. ನಟನೆಯಲ್ಲಿ ಎಷ್ಟು ಮೆಚ್ಚುಗೆಯನ್ನು ಪಡೆದಿದ್ದಾರೆಯೋ ಅಷ್ಟೇ ಮೆಚ್ಚುಗೆ ಅವರ ನಿರ್ದೇಶನಕ್ಕೂ ಕೂಡ ಪಡೆದಿದ್ದಾರೆ. ಈಗ ಟೋಬಿ ಚಿತ್ರದ ಮೂಲಕ ಮತ್ತ ಕನ್ನಡಿಗರ ಮುಂದೆ ಬರುವುದಕ್ಕೆ ಸಜ್ಜಾಗಿದ್ದಾರೆ. ಆದರೆ ರಾಜ್ ಬಿ ಶೆಟ್ಟಿ ಈ ಚಿತ್ರಕ್ಕೆ ಯಾಕೆ ನಿರ್ದೇಶನ ಮಾಡಲಿಲ್ಲ ಎನ್ನುವದರ ಬಗ್ಗೆ , ಯಾವ ರೀತಿಯಾದಂತಹ ಪಾತ್ರಗಳನ್ನು ಅವರು ಮಾಡುವುದಕ್ಕೆ ಇಷ್ಟ ಪಡುತ್ತಾರೆ, ಯಾಕೆ ಬೆರಳೆಣಿಯಷ್ಟು ಸಿನಿಮಾಗಳನ್ನು ಮಾಡುತ್ತಾರೆ ಪ್ರತಿಯೊಂದರ ಬಗ್ಗೆಯೂ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.