ADVERTISEMENT

‘ವಾಮನ’ನಿಗೆ ಜೋಡಿಯಾದ ರೀಷ್ಮಾ ನಾಣಯ್ಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 10:17 IST
Last Updated 11 ಆಗಸ್ಟ್ 2022, 10:17 IST
ರೀಷ್ಮಾ ನಾಣಯ್ಯ
ರೀಷ್ಮಾ ನಾಣಯ್ಯ   

‘ಶೋಕ್ದಾರ್’ ಖ್ಯಾತಿಯ ಧ್ವನೀರ್ ಗೌಡ ನಟಿಸುತ್ತಿರುವ ‘ವಾಮನ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ‘ವಾಮನ’ನಿಗೆ ನಾಯಕಿ ಸಿಕ್ಕಿದ್ದಾಳೆ. ‘ಜೋಗಿ’ ಖ್ಯಾತಿ ಪ್ರೇಮ್‌ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ ಮೂಲಕ ಚಂದನವನ ಪ್ರವೇಶಿಸಿದ್ದ ರೀಷ್ಮಾ ನಾಣಯ್ಯ ಧ್ವನೀರ್‌ಗೆ ಜೋಡಿಯಾಗಿದ್ದಾರೆ.

ಈಗಾಗಲೇ ಚಿತ್ರತಂಡವನ್ನು ರೀಷ್ಮಾ ಸೇರಿಕೊಂಡಿದ್ದಾರೆ. ರೀಷ್ಮಾ, ಸದಾ ಹಸನ್ಮುಖಿಯಾಗಿರುವ ಪಾತ್ರದಲ್ಲಿ ನಟಿಸುತ್ತಿದ್ದು, ನಾಯಕನ ಪಯಣದಲ್ಲಿ ನಾಯಕಿ ಹೇಗೆ ಬೆಂಬಲವಾಗಿ ನಿಲ್ಲುತ್ತಾಳೆ ಎನ್ನುವುದನ್ನು ಸಿನಿಮಾದಲ್ಲಿ ನೋಡಬಹುದು ಎಂದಿದೆ ಚಿತ್ರತಂಡ. ಔಟ್ ಆ್ಯಂಡ್‌ ಔಟ್ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾವಾಗಿರುವ ‘ವಾಮನ’ದಲ್ಲಿ ಪ್ರೇಮಕಥೆಯೊಂದಿದೆ.

ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಚೇತನ್ ಕುಮಾರ್ ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ನಡಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಮಾಸ್ ಲುಕ್‌ನಲ್ಲಿ ಧನ್ವೀರ್‌ ಮಿಂಚಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.