ADVERTISEMENT

ನಿರ್ಮಾಪಕರ ಸಂಘಕ್ಕೆ ರಾಮಕೃಷ್ಣ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 21:28 IST
Last Updated 30 ಡಿಸೆಂಬರ್ 2019, 21:28 IST
ಡಿ.ಕೆ. ರಾಮಕೃಷ್ಣ
ಡಿ.ಕೆ. ರಾಮಕೃಷ್ಣ   

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಡಿ.ಕೆ. ರಾಮಕೃಷ್ಣ (ಪ್ರವೀಣ್ ಕುಮಾರ್) ಅವರು ಆಯ್ಕೆಯಾಗಿದ್ದಾರೆ. ಎಂ.ಜಿ. ರಾಮಮೂರ್ತಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕೆ. ಮಂಜು ಕಾರ್ಯದರ್ಶಿಯಾಗಿ, ರಮೇಶ್ ಯಾದವ್ ಜಂಟಿ ಕಾರ್ಯದರ್ಶಿಯಾಗಿ, ಆರ್.ಎಸ್. ಗೌಡ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ಚುನಾವಣೆ ನಡೆದಿತ್ತು.

2011ರ ನಂತರ ಸಂಘಕ್ಕೆ ಚುನಾವಣೆ ನಡೆದಿರಲಿಲ್ಲ. 2011ರಿಂದಲೂ ಮುನಿರತ್ನ ಅವರೇ ಅಧ್ಯಕ್ಷರಾಗಿದ್ದರು. ಸಂಘಕ್ಕೆ ಚುನಾವಣೆ ನಡೆಸುವಂತೆ ಆದೇಶಿಸಬೇಕು ಎಂದು ಕೋರಿ ನಿರ್ಮಾಪಕ ಬಸಂತ ಕುಮಾರ ಪಾಟೀಲ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ‘ಹೈಕೋರ್ಟ್‌ ಆದೇಶದ ಪರಿಣಾಮವಾಗಿ ಈ ಚುನಾವಣೆ ನಡೆದಿದೆ’ ಎಂದು ನಿರ್ಮಾಪಕ ಬಾ.ಮ. ಹರೀಶ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.