ADVERTISEMENT

ನಾಗಶೇಖರ್‌ ಹೊಸ ಚಿತ್ರ ‘ಭೀಮಾ ಕೋರೆಗಾಂವ್‌’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 23:30 IST
Last Updated 10 ಸೆಪ್ಟೆಂಬರ್ 2023, 23:30 IST
ಚಕ್ರವರ್ತಿ ಚಂದ್ರಚೂಡ್‌, ನಾಗಶೇಖರ್‌, ಛಲವಾದಿ ಕುಮಾರ್‌
ಚಕ್ರವರ್ತಿ ಚಂದ್ರಚೂಡ್‌, ನಾಗಶೇಖರ್‌, ಛಲವಾದಿ ಕುಮಾರ್‌   

ಪ್ರೀತಿ, ಪ್ರೇಮದ ಕಥೆ ಹೇಳುತ್ತಿದ್ದ ನಿರ್ದೇಶಕ ನಾಗಶೇಖರ್‌ ಗಂಭೀರವಾದ ಕಥಾವಸ್ತುವುಳ್ಳ ವಿಷಯವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದಕ್ಕೊಂದು ಬಲವಾದ ಕಾರಣವೂ ಇದೆ. ಅದನ್ನು ವಿವರಿಸುವ ವೇದಿಕೆಯಾಗಿತ್ತು ‘ಭೀಮಾ ಕೋರೆಗಾಂವ್‌’ ಶೀರ್ಷಿಕೆ ಅನಾವರಣ ಸಮಾರಂಭ.

‘1818 ರ ಜ.1 ರಂದು ಸಮಾಜದಲ್ಲಿನ  ಅಸಮಾನತೆಯ ವಿರುದ್ದ ನಡೆದ ‘ಭೀಮಾ ಕೋರೆಗಾಂವ್‌’ ಹೋರಾಟವನ್ನೇ ಕಥೆಯಾಗಿ ಹೊಂದಿರುವ ಚಿತ್ರವಿದು. ಶೋಷಿತರ ಧ್ವನಿಯಾಗಿ ಈ ಚಿತ್ರ ಮೂಡಿಬರಲಿದೆ. ನಾನು ಕೂಡ ಬದುಕಿನ ಒಂದು ಹಂತದಲ್ಲಿ ಶೋಷಿತನಾಗಿದ್ದೆ. ನನ್ನೊಳಗಿನ ನೋವಿನ ಕಥೆಯೂ ಹೌದು. ಮುಂದಿನ ವರ್ಷದ ವೇಳೆಗೆ ಚಿತ್ರೀಕರಣಕ್ಕೆ ಹೋಗುತ್ತೇವೆ. ₹120 ಕೋಟಿ ಬಜೆಟ್‌ನ ಚಿತ್ರವಾಗಿದ್ದು ಸ್ಟಾರ್‌ ನಟರೊಬ್ಬರು ನಾಯಕನಾಗಿರುತ್ತಾರೆ. ದೀಪಿಕಾ ಪಡುಕೋಣೆಯನ್ನು ನಾಯಕಿಯಾಗಿ ಕರೆತರುವ ಆಲೋಚನೆ ಇದೆ’ ಎಂದರು ಚಿತ್ರದ ನಿರ್ದೇಶಕ ನಾಗಶೇಖರ್‌.

ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇನೆ’ ಎಂದರು ನಿರ್ಮಾಪಕರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.