ADVERTISEMENT

‘ಲವ್ಲೀ’ ಆಕ್ಷನ್ ಟೀಸರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 7:59 IST
Last Updated 11 ಫೆಬ್ರುವರಿ 2021, 7:59 IST
‘ಲವ್ಲಿ’ ಚಿತ್ರದಲ್ಲಿ ಪ್ರಸನ್ನ ಪುರಾಣಿಕ್‌ ಮತ್ತು ರೇವತಿ
‘ಲವ್ಲಿ’ ಚಿತ್ರದಲ್ಲಿ ಪ್ರಸನ್ನ ಪುರಾಣಿಕ್‌ ಮತ್ತು ರೇವತಿ   

ಹೊಸಬರೇ ಸೇರಿಕೊಂಡು ನಿರ್ಮಿಸುತ್ತಿರುವ ಚಿತ್ರ ‘ಲವ್ಲಿ’ಯ ಆ್ಯಕ್ಷನ್‌ ಟೀಸರ್‌ ಬಿಡುಗಡೆ ಆಗಿದೆ. ಕಲಬುರ್ಗಿ ಜಿಲ್ಲೆ ಜೇವರ್ಗಿಯ ಪ್ರಸನ್ನ ಪುರಾಣಿಕ್ ಅವರ ಕಥೆ, ಸಾಹಿತ್ಯ ಇದೆ. ಶಿವಗುರು ಫಿಲ್ಮ್ ಎಂಟರ್‌ಟೈನ್ಮೆಂಟ್‌ ಸಂಸ್ಥೆ ಈ ಚಿತ್ರ ನಿರ್ಮಿಸುತ್ತಿದೆ.

ಚಿತ್ರದಲ್ಲಿ ಪೋಷಕರ ಮಹತ್ವ ಸಾರಲಾಗಿದೆ. ಹುಡುಗಿಯ ಮನಸ್ಸನ್ನು ಗೆಲ್ಲಲು ಏನೇನು ಹುಡುಗ ಕಲಿಯುವ ಸದ್ಗುಣಗಳು, ಪ್ರೀತಿ, ಕುಟುಂಬ, ಭಾವನಾತ್ಮಕತೆ ಎಲ್ಲವೂ ಚಿತ್ರದಲ್ಲಿ ಅಡಕವಾಗಿದೆ. ಬೆಂಗಳೂರಿನ ರೇವತಿ ನಾಯಕಿ. ಮತ್ತೊಬ್ಬ ನಾಯಕಿಗಾಗಿ ಶೋಧ ನಡೆದಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ಸಂಜುಬಸಯ್ಯ ಇದ್ದಾರೆ.

ಸಕಲೇಶಪುರ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಉಳಿದವನ್ನು ಬಿಜಾಪುರ, ಹುಬ್ಬಳ್ಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣಕ್ಕೆ ಯೋಜನೆ ಹಾಕಲಾಗಿದೆ. ಶಿವಾನಂದ ಸಾಲಿಮಠ ಅವರ ಸಂಗೀತ ಸಂಯೋಜನೆ ಇದೆ. ಆಶಿಕ್‌ ಮಂಗಳೂರು ಅವರ ಛಾಯಾಗ್ರಹಣ, ಉಜ್ವಲ್‌ ಗೌಡ ಅವರು ಸಂಕಲನ ಮಾಡುತ್ತಿದ್ದಾರೆ. ರವಿಲಿ ಅವರ ಸಾಹಸ ಇದೆ. ನವೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ ಎಂದಿದೆ ಚಿತ್ರತಂಡ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.