ADVERTISEMENT

ಅಮೆರಿಕದ ಟೆಕ್ಸಾಸ್‌ನಲ್ಲಿ 'ಕನ್ನಡ ಕಿರು ಚಿತ್ರೋತ್ಸವ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2021, 5:29 IST
Last Updated 23 ಆಗಸ್ಟ್ 2021, 5:29 IST
ಅಮಾನವೀಯ- ಟೆಕ್ಸಾಸ್‌ ಕನ್ನಡ ಕಿರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರ
ಅಮಾನವೀಯ- ಟೆಕ್ಸಾಸ್‌ ಕನ್ನಡ ಕಿರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರ   

ಅಮೆರಿಕದ ಟೆಕ್ಸಾಸ್‌ನಲ್ಲಿ ವಾಸಿಸುತ್ತಿರುವ ಕನ್ನಡಿಗರು ಆಗಸ್ಟ್‌ 29ರಂದು ಕಿರು ಚಿತ್ರೋತ್ಸವವನ್ನು ಆಯೋಜಿಸಿದ್ದಾರೆ.

ಇದಕ್ಕೆ 'ಟೆಕ್ಸಾಸ್‌ ಕನ್ನಡ ಕಿರು ಚಿತ್ರೋತ್ಸವ' ಎಂದು ಹೆಸರಿಡಲಾಗಿದೆ. ಅಲ್ಲಿನ ಕನ್ನಡ ಸಂಘಗಳು ಒಟ್ಟಾಗಿ ಈ ಉತ್ಸವವನ್ನು ಆಯೋಜಿಸಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಈ ಸಿನಿಮೋತ್ಸವದಲ್ಲಿ ಒಟ್ಟು ಇಪ್ಪತ್ತಾರು ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಕನ್ನಡ ಭಾಷಿಗ ಎಂಜಿನಿಯರ್‌ಗಳು, ವೈದ್ಯರು, ವಾಸ್ತುಶಿಲ್ಪಿಗಳು ಸೇರಿದಂತೆ ಅನ್ಯ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುವವರು ಈ ಕಿರುಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ADVERTISEMENT

'ಟೆಕ್ಸಾಸ್‌ನಲ್ಲಿ ವಾಸಿಸುತ್ತಿರುವ ಕನ್ನಡ ಪ್ರತಿಭೆಗಳನ್ನು ಬೆಂಬಲಿಸಲು ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ' ಎಂದು ಆಯೋಜಕರಾದ ಪ್ರಶಾಂತ್ ಗೌಡ ಮತ್ತು ನಟರಾಜ ರಾವ್ ಅವರು ತಿಳಿಸಿದ್ದಾರೆ.

ಆಸ್ಟಿನ್ ಕನ್ನಡ ಸಂಘ, ಹೂಸ್ಟನ್ ಕನ್ನಡ ವೃಂದ, ಮಲ್ಲಿಗೆ ಕನ್ನಡ ಕೂಟ ಮತ್ತು ಕುವೆಂಪು ಕನ್ನಡ ಸಂಘಗಳು ಈ ಕಿರು ಚಿತ್ರೋತ್ಸವಕ್ಕೆ ಬೆಂಬಲ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.