ADVERTISEMENT

ಬುಕ್‌ಮೈ ಶೋನಲ್ಲಿ 'ಕಾಂತಾರ' ಅಬ್ಬರ: 50 ಲಕ್ಷಕ್ಕೂ ಅಧಿಕ ಟಿಕೆಟ್‌ ಮಾರಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2025, 14:23 IST
Last Updated 5 ಅಕ್ಟೋಬರ್ 2025, 14:23 IST
<div class="paragraphs"><p>(ಚಿತ್ರ–@hombalefilms)</p></div>

(ಚಿತ್ರ–@hombalefilms)

   

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್‌–1’ ಗುರುವಾರ(ಅ.2) ತೆರೆಕಂಡಿದೆ. ಪ್ರೇಕ್ಷಕರ ಮಿಶ್ರಪ್ರತಿಕ್ರಿಯೆಯ ನಡುವೆಯೂ ಗಳಿಕೆಯಲ್ಲಿ ಹಲವು ದಾಖಲೆಗಳನ್ನು ಬದಿಗೊತ್ತಿದೆ. ಸುಮಾರು 5000ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಂಡಿರುವ ಚಿತ್ರ ಬೃಹತ್‌ ಗಳಿಕೆ ಕಂಡಿದೆ.

ಬುಕ್‌ಮೈ ಶೋನಲ್ಲಿ ದಾಖಲೆ

ಬುಕ್‌ಮೈ ಶೋ ಒಂದರಲ್ಲಿಯೇ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ. ಎಲ್ಲೆಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ ಎಂದು ಹೊಂಬಾಳೆ ಫಿಲ್ಸ್ಮ್ಸ್‌ ತಿಳಿಸಿದೆ.

ADVERTISEMENT

‘ಕಾಂತಾರ: ಚಾಪ್ಟರ್‌–1’ ಮೊದಲ ದಿನದ ಗಳಿಕೆಯಲ್ಲಿ ಈ ವರ್ಷದ ಬಾಲಿವುಡ್‌ ಸೂಪರ್‌ ಹಿಟ್‌ ಚಿತ್ರಗಳಾದ ‘ಛಾವಾ’, ‘ಸೈಯಾರಾ’ ಮೊದಲಾದ ಚಿತ್ರಗಳನ್ನು ಹಿಂದಿಕ್ಕಿದೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.