ADVERTISEMENT

ಕೇರಳದಲ್ಲಿ ‘ಕಾಂತಾರ’ ದಾಖಲೆ: ₹55 ಕೋಟಿಗೂ ಅಧಿಕ ಗಳಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 23:32 IST
Last Updated 21 ಅಕ್ಟೋಬರ್ 2025, 23:32 IST
ರಿಷಬ್‌ ಶೆಟ್ಟಿ 
ರಿಷಬ್‌ ಶೆಟ್ಟಿ    

ವಿಶ್ವದಾದ್ಯಂತ ಈಗಾಗಲೇ ₹720 ಕೋಟಿಗೂ ಅಧಿಕ ಗಳಿಕೆ ಮಾಡಿರುವ ನಟ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಒಂದು ದಂತಕಥೆ, ಚಾಪ್ಟರ್‌–1’ ಸಿನಿಮಾ ಕೇರಳದಲ್ಲಿ ಹೊಸ ದಾಖಲೆ ಬರೆದಿದೆ. 

ಈ ಸಿನಿಮಾ ಕೇರಳದಲ್ಲಿ ₹55 ಕೋಟಿಗೂ ಅಧಿಕ ಹಣ ಬಾಚಿದ್ದು, ಬೇರೆ ಭಾಷೆಯ ಸಿನಿಮಾವೊಂದು ಕೇರಳದಲ್ಲಿ ಇಷ್ಟು ಗಳಿಕೆ ಮಾಡಿದ್ದು ದಾಖಲೆಯಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ತಿಳಿಸಿದೆ. ಪೃಥ್ವಿರಾಜ್‌ ಪ್ರೊಡಕ್ಷನ್ಸ್‌ನಡಿ ಈ ಸಿನಿಮಾವನ್ನು ನಟ ಪೃಥ್ವಿರಾಜ್‌ ಸುಕುಮಾರನ್‌ ಕೇರಳದಲ್ಲಿ ವಿತರಣೆ ಮಾಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT