ADVERTISEMENT

ಅದ್ಧೂರಿ ಸೆಟ್‌ನಲ್ಲಿ ಮೂಡಿಬಂದ ಕಾಂತಾರ– ಅಧ್ಯಾಯ 1: ಟ್ರೇಲರ್ ಬಿಡುಗಡೆ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2025, 7:33 IST
Last Updated 22 ಸೆಪ್ಟೆಂಬರ್ 2025, 7:33 IST
   

ಬಹುನಿರೀಕ್ಷಿತ ‘ಕಾಂತಾರ– ಅಧ್ಯಾಯ 1’ ಟ್ರೇಲರ್ ಬಿಡುಗಡೆಯಾಗಿದೆ. ಹೋಂಬಾಳೆ ಫಿಲ್ಮ್ಸ್ ಅಧಿಕೃತ ಯುಟ್ಯೂಬ್‌ ಚಾನೆಲ್‌ನಲ್ಲಿ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ. 

ಅದ್ಧೂರಿ ಸೆಟ್‌ ಹಾಗೂ ಬಿಜಿಎಮ್‌ಗಳನ್ನು ಟ್ರೇಲರ್‌ನಲ್ಲಿ ಕಾಣಬಹುದು.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರ ಅ.2ರಂದು ತೆರೆ ಕಾಣಲಿದೆ. ‘ಬನವಾಸಿಯ ಕದಂಬರೊಂದಿಗೆ ತುಳುನಾಡಿನ ದೈವದ ಕಥೆ ಪ್ರಾರಂಭವಾಗುತ್ತದೆ. ನಾಗಾ ಸಾಧುವಾಗಿ, ಯೋಧನಾಗಿ ಮನುಷ್ಯ ಮತ್ತು ದೈವದ ನಡುವೆ ಸಂಪರ್ಕ ಬೆಸೆಯುವ ಪಾತ್ರದಲ್ಲಿ ರಿಷಬ್‌ ಕಾಣಿಸಿಕೊಂಡಿದ್ದಾರೆ’ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ADVERTISEMENT

ಅಜನೀಶ್‌ ಲೋಕನಾಥ್‌ ಸಂಗೀತ ಸಿನಿಮಾಕ್ಕಿದೆ. ಹೋರಾಟದ ಹಾದಿಯಲ್ಲಿ ನವಿರಾದ ಪ್ರೇಮಕಥೆಯನ್ನೂ ಹೆಣೆದಿರುವುದನ್ನು ಟ್ರೇಲರ್‌ನಲ್ಲಿ ಕಾಣಬಹುದು. ರುಕ್ಮಿಣಿ ವಸಂತ್‌, ರಿಷಬ್‌ ಶೆಟ್ಟಿಗೆ ಜತೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.