ADVERTISEMENT

‘ಅರುಂಧತಿ’ ಹಿಂದಿ ರಿಮೇಕ್‌ನಲ್ಲಿ ಕರೀನಾ?

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:30 IST
Last Updated 24 ಸೆಪ್ಟೆಂಬರ್ 2019, 19:30 IST
ಅರುಂಧತಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ
ಅರುಂಧತಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ   

ತೆಲುಗು ಚಿತ್ರ ‘ಅರುಂಧತಿ’ ಸಿನಿಮಾದಲ್ಲಿ ನಟಿ ಅನುಷ್ಕಾ ಶೆಟ್ಟಿ ಅಭಿನಯವನ್ನು ಮೆಚ್ಚದವರಿಲ್ಲ. ದಶಕಗಳ ಹಿಂದೆ ಈ ಚಿತ್ರ ಬಿಡುಗಡೆಗೊಂಡಿದ್ದರೂ ಈಗಲೂ ಈ ಚಿತ್ರದ ಹೆಸರು ಕೇಳಿಬರುತ್ತಲೇ ಇರುತ್ತದೆ. ಈ ಚಿತ್ರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನದ ಸಮಯದಲ್ಲೇ, ಇದು ಹಿಂದಿಗೆ ರಿಮೇಕ್‌ ಆಗುತ್ತದೆ ಎಂದು ಸುದ್ದಿಗಳು ಹರಿದಾಡಿದ್ದವು.

ತೆಲುಗು ಚಿತ್ರ ‘ಅರುಂಧತಿ’ ರಿಮೇಕ್‌ ಚಿತ್ರದಲ್ಲಿ ಕರೀನಾ ಕಪೂರ್‌ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ರಿಮೇಕ್‌ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂದು ಗಾಳಿಸುದ್ದಿಗಳು ಹರಿದಾಡಿದ್ದವು. ಆದರೆ ಅನಂತರ ರಿಮೇಕ್‌ ಚಿತ್ರ ಸೆಟ್ಟೇರುವ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಈಗ ಮತ್ತೊಮ್ಮೆ ‘ಅರುಂಧತಿ’ ಚಿತ್ರ ಬಾಲಿವುಡ್‌ಗೆ ರಿಮೇಕ್‌ ಆಗುತ್ತಿದೆ. ಇಬ್ಬರು ಚಿತ್ರನಿರ್ದೇಶಕರು ಚಿತ್ರದ ಹಿಂದಿ ರಿಮೇಕ್‌ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂದು ಬಿ–ಟೌನ್‌ನಲ್ಲಿ ಸುದ್ದಿ ಹಬ್ಬಿದೆ.

ಅನುಷ್ಕಾ ಶೆಟ್ಟಿ ನಿರ್ವಹಿಸಿದ ‘ಅರುಂಧತಿ’ ಪಾತ್ರಕ್ಕೆ ಕರೀನಾ ಅವರೇ ಮೊದಲ ಆಯ್ಕೆ. ಒಂದು ವೇಳೆ ಅವರು ಲಭ್ಯವಾಗದಿದ್ದರೆ ಅನುಷ್ಕಾ ಶರ್ಮ ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸದ್ಯ ಕರೀನಾ ‘ಗುಡ್‌ ನ್ಯೂಸ್‌’, ‘ಅಂಗ್ರೇಜಿ ಮೀಡಿಯಂ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕರಣ್‌ ಜೋಹರ್‌ ಅವರ ‘ತಖ್ತ್‌’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.