ADVERTISEMENT

ಎರಡನೇ ಮಗನಿಗೆ ‘ಜೆಹ್’ ಎಂದು ಹೆಸರಿಟ್ಟ ಸೈಫ್–ಕರೀನಾ

ಪಿಟಿಐ
Published 9 ಜುಲೈ 2021, 17:17 IST
Last Updated 9 ಜುಲೈ 2021, 17:17 IST
   

ಮುಂಬೈ: ಬಾಲಿವುಡ್ ತಾರಾ ದಂಪತಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಎರಡನೇ ಮಗನಿಗೆ ‘ಜೆಹ್’ ಎಂದು ನಾಮಕರಣ ಮಾಡಿದ್ದಾರೆ ಎಂದು ಹಿರಿಯ ನಟ ರಣಧೀರ್ ಕಪೂರ್ ಖಚಿತಪಡಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಗರ್ಭವತಿಯಾಗಿರುವುದನ್ನು ಘೋಷಿಸಿದ್ದ ಕರೀನಾ ಕಪೂರ್, ಈ ವರ್ಷದ ಫೆಬ್ರವರಿ 21 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.

‘ಹೌದು, ಕರೀನಾ ಮತ್ತು ಸೈಫ್ ಅವರ ಮಗನಿಗೆ ‘ಜೆಹ್’ಎಂದು ಹೆಸರಿಟ್ಟಿದ್ದಾರೆ’ ಎಂದು ಕರೀನಾ ತಂದೆ ರಣಧೀರ್ ಕಪೂರ್ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

2016ರ ಡಿಸೆಂಬರ್ 20 ರಂದು ಜನಿಸಿದ ಕರೀನಾ ಮತ್ತು ಸೈಫ್ ದಂಪತಿಯ ಮೊದಲ ಮಗ ತೈಮೂರ್‌ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ತೈಮೂರ್ ಕಂಡಲ್ಲೆಲ್ಲ ಪಾಪರಾಜಿಗಳು ಸುತ್ತವರಿದು ಫೋಟೊ ಕ್ಲಿಕ್ಕಿಸುವುದು ಸಾಮಾನ್ಯವಾಗಿತ್ತು. ಅದರಿಂದ ಬೇಸತ್ತ ತೈಮೂರ್ ಪಾಪರಾಜಿಗಳ ವಿರುದ್ಧ ಕೋಪಗೊಂಡ ಘಟನೆಯೂ ವರದಿಯಾಗಿತ್ತು.

ಮೊದಲ ಮಗನಿಗೆ ತೈಮೂರ್ ಎಂದು ಹೆಸರಿಟ್ಟ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಜನರು ಹೆಸರಿನ ಮೂಲವನ್ನು ಪ್ರಶ್ನಿಸಲು ಪ್ರಾರಂಭಿಸಿದ್ದರು.

ಸೈಫ್‌ಗೆ ಮತ್ತು ವಿಚ್ಛೇದಿತ ಮೊದಲ ಪತ್ನಿ ಅಮೃತಾ ಸಿಂಗ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಮಗಳು ಸಾರಾ ಅಲಿ ಖಾನ್ 25 ಮತ್ತು ಮಗ ಇಬ್ರಾಹಿಂ ಅಲಿ ಖಾನ್‌ಗೆ 20 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.