ADVERTISEMENT

‘ಕರಿಕಾಡ’ ಚಿತ್ರದ ‘ಕಬ್ಬಿನ ಜಲ್ಲೆ’ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 0:45 IST
Last Updated 2 ಜನವರಿ 2026, 0:45 IST
ನಟರಾಜ್‌,ನಿರೀಕ್ಷಾ ಶೆಟ್ಟಿ
ನಟರಾಜ್‌,ನಿರೀಕ್ಷಾ ಶೆಟ್ಟಿ   

ನಟರಾಜ್‌ ಹಾಗೂ ನಿರೀಕ್ಷಾ ಶೆಟ್ಟಿ ಜೋಡಿಯಾಗಿ ನಟಿಸಿರುವ ‘ಕರಿಕಾಡ’ ಚಿತ್ರದ ‘ಕಬ್ಬಿನ ಜಲ್ಲೆ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಗಿಲ್ಲಿ ವೆಂಕಟೇಶ್ ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರ ಫೆಬ್ರುವರಿ 6ರಂದು ತೆರೆಗೆ ಬರಲಿದೆ.

ಗೀತೆಗೆ ಅತಿಶಯ್ ಜೈನ್‌ ಸಂಗೀತವಿದ್ದು, ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಅತಿಶಯ್ ಹಾಗೂ ಮಾನಸ ಹೊಳ್ಳ ಹಾಡಿಗೆ ಧ್ವನಿಯಾಗಿದ್ದಾರೆ. 

‘ಇದೊಂದು ಮ್ಯೂಸಿಕಲ್ ಜರ್ನಿ. ಸಾಹಸಮಯ ಅಂಶಗಳನ್ನು ಹೊಂದಿರುವ ಸಿನಿಮಾ. ನಾನು ಮೂಲತಃ ಐಟಿ ಉದ್ಯೋಗಿ. ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ಚಿತ್ರೀಕರಣ ಮಾಡಿ ಈ ಚಿತ್ರವನ್ನು ಮುಗಿಸಿದ್ದೇವೆ. ನನ್ನ ಪತ್ನಿ ದೀಪ್ತಿ ದಾಮೋದರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ’ ಎಂದಿದ್ದಾರೆ ನಟರಾಜ್‌. 

ADVERTISEMENT

ಅತಿಶಯ್ ಜೈನ್ ಹಾಗೂ ಶಶಾಂಕ್ ಶೇಷಗಿರಿ ಸಂಗೀತ, ಜೀವನ್ ಗೌಡ ಛಾಯಾಚಿತ್ರಗ್ರಹಣ, ದೀಪಕ್ ಸಿ.ಎಸ್ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.